ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಆದ ವೈಚಾರಿಕ ಪಲ್ಲಟಗಳು, ಹೊಸ ವಿಚಾರಗಳು, ಹೊಸ ಸಾಮಾಜಿಕ ಚಳುವಳಿಗಳು ಆರಂಭಗೊಂಡ ಪರಿಣಾಮದಿಂದ ಭಾರತದ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಪೇಶ್ವೆಯ ಕಟ್ಟಕಡೆಯ ತಲೆಮಾರಿನ ದುರಂತವನ್ನು ಮೊದಲ ಲೇಖನದಲ್ಲಿ ವಿವರಿಸಲಾಗಿದೆ. ಜೋತಿರಾವ್ ಗೋವಿಂದರಾವ್ ಅವರು , ’ಗುಲಾಮಗಿರಿಯ ಪ್ರಸ್ತಾವನೆ’ ಎಂಬ ಲೇಖನದಲ್ಲಿ, ಆಂಗ್ಲರ ಆಗಮನ ದೇಶದಲ್ಲಿ ಹೇಗೆ ಶೂದ್ರರು ಮತ್ತು ದಲಿತರಿಗೆ ಸ್ವಾತಂತ್ರ್ಯವನ್ನು ನೀಡಿತು. ಬ್ರಾಹ್ಮಣರು ಮತ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಆಯಕಟ್ಟಿನ ಜಾಗಪಡೆದುದರಿಂದ ಶೂದ್ರರು ಹೇಗೆ ಬ್ರಾಹ್ಮಣರ ಗ್ರಂಥಗಳ ಮೂಲಕ ಮಾನಸಿಕ ದಾಸರಬೇಕಾಯಿತು ಎಂಬುದನ್ನು ವಿವರಿಸಲಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮಂಡಿತವಾದ ಹಲವು ವಿಚಾರಧಾರೆಗಳ, ಚಿಂತನೆಗಳ ಸ್ವರೂಪವನ್ನು ಇಲ್ಲಿ ಚಿತ್ರಿಸಲಾಗಿದೆ. ಕನ್ನಡಕ್ಕೆ ’ಚಂದ್ರಕಾಂತ ಪೋಕಳೆ’ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.