ಮಹಾತ್ಮ

Author : ಕೃಷ್ಣಮೂರ್ತಿ ನಾಡಿಗ

Pages 492

₹ 21.00




Year of Publication: 1976
Published by: ಗಾಂಧಿ ಭವನ
Address: ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಡಿ.ಜಿ. ತೆಂಡೂಲ್ಕರ್ ಅವರು ಮಹಾತ್ಮ ಗಾಂಧೀಜಿ ಅವರ ಕುರಿತು ಬರೆದ ಲೇಖನಗಳ ಕನ್ನಡಾನುವಾದ-ಮಹಾತ್ಮ. ಇದನ್ನು ಕೃಷ್ಣಮೂರ್ತಿ ನಾಡಿಗ ಅವರು ಸಂಪಾದಿಸಿದ್ದಾರೆ. ಕೆ.ಎಸ್. ನರಸಿಂಹ ಸ್ವಾಮಿ, ಕೆ.ನರಸಿಂಹ ಶಾಸ್ತ್ರಿ, ಕೆ.ಎಸ್. ನಾರಾಯಣ ಸ್ವಾಮಿ ಹಾಗೂ ಜಿ.ವಿ. ನಾರಾಯಣ ಮೂರ್ತಿ ಅವರು ಈ ಲೇಖನಗಳನ್ನು ಅನುವಾದಿಸಿದ್ದಾರೆ.

ಸ್ವಾತಂತ್ಯ್ರ-ಪ್ತತಿಜ್ಞೆ, ದಿಂಡಿಯಾತ್ರೆ, ದೇಶದ ಮೇಲೆ ಬಿರುಗಾಳಿ, ಬೆನ್ನಿನ ಮೇಲೆ ಇರಿತ, ದೈವ ಕ್ರೋಧ, ನೊಂದ ಬಿಹಾರದಲ್ಲಿ ಹೀಗೆ ಒಟ್ಟು 22 ಲೇಖನಗಳಿದ್ದು, ಗಾಂಧೀಜಿಯ ಸಂಪೂರ್ಣ ವಿಚಾರಧಾರೆಯನ್ನು ಅರ್ಥೈಸಿಕೊಳ್ಳುವಂತೆ ಸರಳವಾಗಿ ಅನುವಾದಿಸಲಾಗಿದೆ.

About the Author

ಕೃಷ್ಣಮೂರ್ತಿ ನಾಡಿಗ

ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ (ಜನನ: 1921) ಡಾ.ನಾಡಿಗ ಕೃಷ್ಣಮೂರ್ತಿ ಜನಿಸಿದರು.ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ನಂತರ ಕಾಲೇಜಿಗೆ ಸೇರಿದರು. ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನಂತರ ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ವಿದೇಶಿ ವಿದ್ಯಾಲಯಗಳಿಗೆ ಅವರು ಸಂದರ್ಶಕ ಅಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ಮಾಡಿದ್ದಾರೆ.  ‘ಮಾನಸ ಗಂಗೋತ್ರಿ’ ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ. ಕರ್ನಾಟಕ ಪತ್ರಿಕಾ ಅಕಾಡೆಮಿಗೆ ಪ್ರಥಮ ...

READ MORE

Related Books