ನಂಬಿಕೆ, ಮೂಢನಂಬಿಕೆಗಳ ನಡುವೆ ಸಿಕ್ಕು ಜನರು ಮೌಢ್ಯದ ದಾಸರಾಗುತ್ತಿದ್ದಾರೆ. ವಿಜ್ಞಾನ ಮುಂದುವರೆದಿರುವ ಇಂದಿನ ಕಾಲದಲ್ಲಿಯೂ ನಿಧಿ ಸಿಗುತ್ತದೆ ಎಂದು ಹೇಳಿ ಮಕ್ಕಳನ್ನು ಬಲಿಕೊಡುವ ಅನಾಚಾರ ಪದ್ಧತಿ ಈಗಲೂ ಭಾರತದಲ್ಲಿ ಚಾಲ್ತಿಯಲ್ಲಿದೆ. ದೇವರ ಹೆಸರಿನಲ್ಲಿ ನಡೆಯುವ ಮಡೆಸ್ನಾನ, ಕೂದಲು ತಿನ್ನುವ ಪದ್ದತಿ, ಎಳೆಗೂಸುಗಳನ್ನು ಮೇಲಿಂದ ಬಿಸಾಕುವಂತಹ ಅವೈಜ್ಞಾನಿಕ ಘಟನೆಗಳು ನಡೆಯುತ್ತಿರುವುದರ ಬಗ್ಗೆ ನಾವು ಆಗಾಗ ಸುದ್ದಿ ವಾಹಿನಿಗಳಲ್ಲಿ ನೋಡಿಯೇ ಇರುತ್ತವೆ.
ಪ್ರಸ್ತುತ ದೇವರು ದೆವ್ವ ವಿಜ್ಞಾನ ಕೃತಿಯು ಇಂತಹ ಅವೈಜ್ಞಾನಿಕ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತಾ ವೈಜ್ಞಾನಿಕತೆಯ ಬಗ್ಗೆ ಅರಿವು ಮೂಡಿಸುತ್ತದೆ. ಡಾ. ಅಬ್ರಹಾಂ ಟಿ. ಕೋವೂರ್ ಅವರು ರಚಿಸಿರುವ ಈ ಕೃತಿಯನ್ನು ಪುರುಷೋತ್ತಮ ಬಿಳಿಮಲೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.