ಎಲ್ಲ ಜಾತಿ ಮತಗಳಲ್ಲೂ ಇರಬಹುದಾದ ಬ್ರಾಹ್ಮಣ್ಯಕ್ಕೂ ಮತ್ತು ಬುದ್ಧನ ಚಿಂತನೆಗಳಿಗೂ ಇರಬಹುದಾದ ವ್ಯತ್ಯಾಸಗಳನ್ನು ತಿಳಿಸಿಕೊಡುವ ಕೃತಿ ’ದೇವರ ರಾಜಕೀಯ ತತ್ವ’. ಮೂಲ ತೆಲುಗಿನಲ್ಲಿರುವ ಕೃತಿಯ ಕರ್ತೃ ಚಿಂತಕ ಕಂಚ ಐಲಯ್ಯ. ಕನ್ನಡಕ್ಕೆ ತಂದವರು ಡಾ. ಜಾಜಿ ದೇವೇಂದ್ರಪ್ಪ. ಕೃತಿಯಲ್ಲಿ ಐಲಯ್ಯ ಅವರು ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವುದು ಹೀಗೆ: ’ನಾನು ವಿದ್ಯಾರ್ಥಿಯಾಗಿದ್ದಾಗ ಪ್ರಾಚೀನ ತತ್ವಶಾಸ್ತ್ರ ಅಧ್ಯಯನದಲ್ಲಿ ಕೌಟಿಲ್ಯ, ಮನುಗಳು ಮಾತ್ರ ಸಿಲಬಸ್ನಲ್ಲಿರುತ್ತಿದ್ದರು. ವೇದದ ಕಾಲದಿಂದ ಗಣರಾಜ್ಯಗಳು, ಜನಪದಗಳು, ಮಹಾಜನಪದಗಳು, ಸಾಮ್ರಾಜ್ಯ ವ್ಯವಸ್ಥೆಗಳು ಏರ್ಪಡುವವರೆಗೆ ಈ ದೇಶದಲ್ಲಿ ತಾತ್ವಿಕ ಸಂಘರ್ಷ ನಡೆಯಿತೆಂಬ ಬಗ್ಗೆ ಎಂ.ಎ. ಹಂತದಲ್ಲಿಯೂ ಚರ್ಚೆ ನಡೆಯಲಿಲ್ಲ. ಬುದ್ದಿಜಂನ್ನು ಅಲ್ಲಿ ಇಲ್ಲಿ ಕೊಂಚ ಹೇಳುತ್ತಿದ್ದರು. ಆದರೆ ಬುದ್ದ ಒಬ್ಬ ರಾಜಕೀಯ ತಾತ್ವಿಕ ತಜ್ಞ ಎಂದು ಚಿಂತಿಸಲು ಅವಕಾಶವಿರಲಿಲ್ಲ. ಚಳುವಳಿಯ ಭಾಗವಾಗಿ ಆಸಕ್ತಿಗಾಗಿ ಡಿ.ಡಿ. ಕೋಸಾಂಬಿ, ಆರ್.ಎಸ್. ಶರ್ಮ, ರೋಮಿಲಾ ಥಾಪರ್ ರಚನೆಗಳನ್ನು ಓದಿದಾಗ ಚರಿತ್ರೆಯನ್ನು ಕೊಂಚ ಭಿನ್ನ ನೆಲೆಯಲ್ಲಿ ನೋಡುವ ಧೋರಣೆ ಕಂಡುಬಂದಿತು. ಮುಖ್ಯವಾಗಿ ಡಿ.ಡಿ. ಕೋಸಾಂಬಿ, ಆರ್. ಎಸ್. ಶರ್ಮರ ರಚನೆಗಳು ಒಂದು ಹೊಸ ದೃಷ್ಟಿಕೋನವನ್ನು ನಮ್ಮ ಮುಂದಿರಿಸಿದವು. ಇವರ ರಚನೆಗಳನ್ನು ಓದಿದ ಮೇಲೆ ತಾತ್ವಿಕ ರಂಗದಲ್ಲಿ ಬುದ್ಧ ಮತ್ತು ಬ್ರಾಹ್ಮಣಿಜಂ ನಡುವೆ ನಡೆದ ಸಂಘರ್ಷವನ್ನು ಅಧ್ಯಯನ ಮಾಡಬೇಕೆಂಬ ಅಭಿಲಾಷೆ ನನ್ನಲ್ಲಿ ಬೆಳೆಯಿತು.
ಒಂದು ಕಡೆ ಸೌರ ಹಕ್ಕುಗಳ ಚಳುವಳಿ ಮತ್ತೊಂದೆಡೆ ಕಮ್ಯುನಿಸ್ಟ್ ಸಿದ್ದಾಂತ, ಆಚರಣೆ ಚಳುವಳಿ ಕುಲಕ್ಕೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಚರ್ಚಿಸಲು ನಿರಾಕರಿಸುತ್ತಿದ್ದ ದಿನಗಳವು. ಮತ ವ್ಯವಸ್ಥೆಯ ಮೇಲೆ ಬಲವಾದ ಅಧ್ಯಯನ ನಡೆಯದಂತೆ ತತ್ವಶಾಸ್ತ್ರವನ್ನು ಸಂಶೋಧಿಸುವುದು ಕಷ್ಟ. ಭಾರತ ದೇಶದಲ್ಲಿ ಮತ ಕುಲದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಕುಲವ್ಯವಸ್ಥೆಯನ್ನು ಕೂಡ ಮಥಿಸುವ ಅಗತ್ಯವಿದೆ. ವೈದಿಕ ಹಿಂದೂಯಿಜರಿ, ಬುದ್ದಿಜಂಗಳ ನಡುವೆ ತಾತ್ವಿಕ ಸಂಘರ್ಷ ನಡೆದಂತೆ ಬುದ್ದಿಜಂ ದೊಡ್ಡ ಶಕ್ತಿಯಾಗಿ ಹೇಗೆ ಬೆಳೆಯಿತೆಂಬ ಪ್ರಶ್ನೆ ನನ್ನನ್ನು ಹಲವು ಕಾಲ ಬಾಧಿಸಿದೆ. ಅಂಬೇಡ್ಕರ್, ಫುಲೆ, ಪೆರಿಯಾರ್ರ ರಚನೆಗಳು ಪರಿಚಯವಾಗುವ ಮೊದಲು ಕುಲದೊಂದಿಗೆ ಸಂಬಂಧವಿಲ್ಲದ ತಾತ್ವಿಕ ಪ್ರಶ್ನೆಗಳೇ ಮೌಲಿಕವಾಗಿದ್ದವು.
ಕಾರೆಂಚಡು ಹೋರಾಟ ನಡೆದ ಮೇಲೆ ಈ ಥೀಸಿಸ್ ಬರೆಯಲು ತೊಡಗಿಕೊಂಡಾಗ ನನ್ನ ಅಧ್ಯಯನದ ದಿಕ್ಕು ಬದಲಾಯಿತು. ಮಾರ್ಕ್ಸಿಜಂನೊಂದಿಗೆ ಅಂಬೇಡ್ಕರ್ ವಾದವನ್ನು ಒಂದು ಕ್ರಮದಲ್ಲಿ ತೆಗೆದುಕೊಳ್ಳಲಾರಂಭಿಸಿದೆ. ಆ ದಿನಗಳಲ್ಲಿ ಅಂಬೇಡ್ಕರ್ರ ಮೇಲೆ ಅಂಬೇಡ್ಕರಿಜರಿ ಎಂಬ ಪದಕೋಶದ ಮೇಲೆ ಕಮ್ಯೂನಿಸ್ಟ್, ಪೌರಹಕ್ಕುಗಳ ಶ್ರೇಣಿಗಳಲ್ಲಿ ಬಹು ತಿರಸ್ಕಾರದ ನೋಟವಿತ್ತು. ಇದನ್ನು ತಾಳಿಕೊಂಡು ನಾನು ಹಾಕುವ ಪ್ರಶ್ನೆಗಳಿಗೆ ಗೌರವವಿಲ್ಲದ ದೆಸೆಯಲ್ಲಿ ಇಂತಹ ಥೀಸಿಸ್ ಬರೆಯುವುದು ದೊಡ್ಡ ಸಮಸ್ಯೆ. ಸ್ತ್ರೀವಾದ ಆಲೋಚನೆಗಳಿಂದ, ಕೆಲವು ನಿರ್ದಿಷ್ಟ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗೌರವಿಸುವ ಪ್ರೊ. ರಮಾ ಮೇಲ್ನೋಟೆಯವರಲ್ಲಿ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಆ ದೆಸೆಯಲ್ಲಿ ಹೈದರಾಬಾದ್ ನಲ್ಲಿ ಸ್ತ್ರೀವಾದಿಗಳು ಎತ್ತುತ್ತಿದ್ದ ಪ್ರಶ್ನೆಗಳು ನನಗೆ ತುಂಬ ಧೈರ್ಯ ನೀಡಿದವು. ಸ್ತ್ರೀವಾದ ದಲಿತ ಬಹುಜನವಾದ ಕೂಡಿ ಬಂದುದರಿಂದ ಹೊಸ ಆಲೋಚನೆ ಮಾಡುವ ನನ್ನಂಥ ವ್ಯಕ್ತಿಗಳಿಗೆ ಆ ದೆಸೆ ಒಳಿತಾಯಿತು.’
©2024 Book Brahma Private Limited.