ಬಹುಜನ, ಬಹುಸಂಸ್ಕೃತಿ ಎಂಬುದೇ ಅರ್ಥ ಕಳೆದುಕೊಳ್ಳುತ್ತಿರುವ ಹೊತ್ತಿದು. ಭಾಷೆ, ನಾಗರಿಕತೆ, ಜನ ಸಮೂಹವೆಲ್ಲಾ ಏಕರೂಪಕ್ಕೆ ತಿರುಗುತ್ತಿರುವ ಸಂದರ್ಭ ಇದು. ವೈವಿಧ್ಯತೆ ಇಲ್ಲವಾಗಿ ಎಲ್ಲೆಡೆಯೂ ಏಕತಾನತೆ ರೂಪುಗೊಳ್ಳುತ್ತಿದೆ. ನಾಗರಿಕತೆ, ಸಂಸ್ಖೃತಿ, ಜನಜೀವನವನ್ನು ಅದು ಏಕರೂಪಗೊಳಿಸುತ್ತಿದೆ. ಸಾಹಿತ್ಯದೊಳಗೂ ಈ ಏಕತಾನತೆ ಕಾಣುತ್ತಿದೆ. ಹೀಗೆ ಏಕತ್ರಗೊಳ್ಳುವುದರಿಂದ ಆಗುವ ಸಮಸ್ಯೆಗಳು, ಲೇಖಕ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮಹತ್ವದ ತೀರ್ಮಾನಗಳನ್ನು ’ಬಹುಜನ ಸಂಸ್ಕೃತಿವಾದ ಮತ್ತು ಲೇಖಕ’ ಕೃತಿ ಚರ್ಚಿಸುತ್ತದೆ.
ಲೇಖಕ ಜಯಂತ ಪವಾರ ಅವರು ಬರೆದಿರುವ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.