ಭಾರತ, ಇತಿಹಾಸ, ಸಂಸ್ಕೃತಿ ಹಾಗೂ ಆಶಯದ ವಿಷಯ ವಸ್ತುವಿನ ಸುದೀರ್ಘ ಚಿಂತನೆಗಳಿರುವ ಕೃತಿ ಯಾರು ಭಾರತ ಮಾತೆ?. ಪುರುಷೋತ್ತಮ ಅಗರವಾಲ್ ಅವರು ಸಂಪಾದಿಸಿದ ಇಂಗ್ಲಿಷ್ ಮೂಲದ ಈ ಕೃತಿಯನ್ನು ಡಾ. ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಅವರ ಚಿಂತನೆಗಳಿರುವ ಬರಹಗಳನ್ನು ಈ ಕೃತಿಯು ಒಳಗೊಂಡಿದೆ.
ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ...
READ MORE