ಭಾರತೀಯ ಸಾಹಿತ್ಯ ವಿಮರ್ಶೆಯಲ್ಲಿ ಸಂಪ್ರದಾಯ ಮತ್ತು ಬದಲಾವಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಜಿ. ಎನ್. ದೇವಿ ಅವರು ಬರೆದಿರುವ 'ಆಪ್ಟರ್ ಅಮೈಕಿಯಾ' ಕೃತಿಯ ಅನುವಾದ ಕೃತಿಯಾಗಿದೆ ಇದು. ಸಾಂಸ್ಕೃತಿಕ ಮರವು ವರ್ತಮಾನದಲ್ಲೂ ಚರ್ಚೆಗೊಳಗಾಗುತ್ತಿರುವ ವಸ್ತು. ಅದರ ಕುರಿತ ವಾಗ್ವಾದಗಳು ಹಿಂದೆಯೂ ಇತ್ತು. ಇಂದಿಗೂ ಮುಂದುವರಿಯುತ್ತಿದೆ. ಈ ಪ್ರಬಂಧವು ವಿಮರ್ಶೆಯಲ್ಲಿ ಬಿಕ್ಕಟ್ಟನ್ನು ವಿವರಿಸುವುದರಿಂದ ಪ್ರಾರಂಭಿಸಿ ಭಾರತೀಯ ಸಾಹಿತ್ಯ ವಿಮರ್ಶೆಯ ತಾತ್ಕಾಲಿಕ ಇತಿಹಾಸದ ಬರವಣಿಗೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕೃತಿಯಲ್ಲಿ ಪ್ರಮುಖ ಮೂರು ಅಧ್ಯಾಯಗಳಿವೆ. ಮೊದಲನೆ ಅಧ್ಯಾಯ ಸಂಪ್ರದಾಯ ಮತ್ತು ವಿಸ್ಕೃತಿಗೆ ಸೀಮಿತವಾಗಿದೆ. ಸಾಹಿತ್ಯ ವಿಮರ್ಶೆಯಲ್ಲಿ ಬಿಕ್ಕಟ್ಟು, ಪರಂಪರೆ, ಆಧುನಿಕ ಭಾರತೀಯ ಬುದ್ದಿಜೀವಿಗಳು ಮತ್ತು ಪಾಶ್ಚಾತ್ಯ ಚಿಂತನೆ, ಆಧುನಿಕ ಭಾರತ ಮತ್ತು ಸಂಸ್ಕೃತ ಪರಂಪರ, ವಸಾಹತು ಪರಿಣಾಮ, ಭಾಷಾ ಸಾಹಿತ್ಯಗಳು ಮತ್ತು ಆಧುನಿಕ ನಿಲುವು, ಸಂಸ್ಕೃತಿ, ವಿಸ್ಮತಿ ಮೊದಲಾದವುಗಳು ಈ ಅಧ್ಯಾಯದಲ್ಲಿ ಚರ್ಚೆಗೊಳಗಾಗಿವೆ. ವಿಸ್ಮತಿಯ ನಂತರ ಕೃತಿಯಲ್ಲಿ ತ್ರಿಪಕ್ಷೀಯ ಸಂಬಂಧ ಮತ್ತು ದೇಶೀವಾದದ ಚರ್ಚೆಗಳಿವೆ. ಉಪಸಂಹಾರದಲ್ಲಿ ವಿಮರ್ಶೆಯ ಕರ್ತವ್ಯವನ್ನು ಲೇಖಕರು ಬೊಟ್ಟು ಮಾಡುತ್ತಾರೆ. ಭಾರತೀಯ ಸಾಹಿತ್ಯದ ಕುರಿತಂತೆ ಗಂಭೀರವಾಗಿ ಅಧ್ಯಯನ ಮಾಡುವವರಿಗೆ, ಅಕಾಡಮಿಕ್ ರೀತಿಯಲ್ಲಿ ಇದೊಂದು ಮಹತ್ವದ ಕೃತಿಯಾಗಿದೆ.
©2024 Book Brahma Private Limited.