ವಾನಪ್ರಸ್ಥ

Author : ಚಂದ್ರಕಾಂತ ಪೋಕಳೆ

Pages 150

₹ 160.00




Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 080-22161900

Synopsys

ಪುರಾತನ ಭಾರತೀಯ ಜೀವನ ವ್ಯವಸ್ಥೆಯಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದಾಗಿದೆ.  ಬದುಕಿನ ಎಲ್ಲ ಹಂತಗಳನ್ನು ಅನುಭವಿಸಿ, ದಂಪತಿಗಳು ಕಾಡು ಸೇರಿ ಅಲ್ಲಿನ ನಿಸರ್ಗದತ್ತ ಜೀವನವನ್ನು ಅನುಭವಿಸುವುದನ್ನು ನಾವು ವಾನಪ್ರಸ್ಥ ವ್ಯವಸ್ಥೆಯಲ್ಲಿ ಕಾಣಬಹುದು. ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು ಎನ್ನುವುದು ಇರಲಿಲ್ಲ. ನದಿ ಮೂಲಗಳು, ಕಾಡು ಮೊದಲಾದ ಸ್ಥಳಗಳೇ ಪುಣ್ಯ ಸ್ಥಳಗಳಾಗಿದ್ದವು. ಲೇಖಕರು ಈ ಆಚರಣೆಗೆ ಒಂದು ಅರ್ಥಪೂರ್ಣ ವ್ಯಾಖ್ಯಾನವನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಗಣೇಶ್ ದೇವಿ ಬರೋಡೆಯ ಸನಿಹದಲ್ಲಿರುವ ತೇಜಗಡ ಎಂಬ ಆದಿವಾಸಿ ಹಾಡಿಯಲ್ಲಿ ತಮ್ಮ ವಾನಪ್ರಸ್ಥವನ್ನು ಆರಂಭಿಸಿದರು. ಆದಿವಾಸಿಗಳ ಅಸ್ಮಿತೆಯ ವಿಕಾಸವೇ ಈಗ ದೇವಿಯವರ ಉಳಿದ ಬದುಕಿನ ಆಯುಷ್ಯವಾಗಿದೆ. ಆಧುನಿಕ ಮತ್ತು ಪ್ರಾಚೀನತೆಯ ನಡುವಿನ ಸಮನ್ವಯ, ಬಿಕ್ಕಟ್ಟು, ಸಂಘರ್ಷ ಇವೆಲ್ಲವನ್ನೂ ಅವರ ವಾನಪ್ರಸ್ಥದಲ್ಲಿ ನಾವು ಕಾಣಬಹುದು. ಸಂಶೋಧನೆ ಮತ್ತು ಸೃಜನಶೀಲತೆಯ ಒಂದು ಅಪೂರ್ವ ರಸಾಯನವು ಓದುಗನನ್ನು ಪುಲಕಿತಗೊಳಿಸುತ್ತದೆ. ಉಪಭಾಷೆ, ಗುಜರಾತ್ ದಂಗೆ, ಕಾಡಿನ ನಾಶ ಇವೆಲ್ಲವನ್ನು ಒಂದಕ್ಕೊಂದು ಜೋಡಿಸುತ್ತಾ ಹೋಗುವ ಅವರ ನಿರೂಪಣೆಯ ಕ್ರಮ ಕುತೂಹಲಕಾರಿಯಾದುದು. ಈ ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಕಾಡು ಅವರ ಮನದೊಳಗಿನ ಅಭಿವ್ಯಕ್ತಿಯಾಗಿ ಸಹಜ ರೀತಿಯಲ್ಲಿ ಹೊರಹೊಮ್ಮುತ್ತದೆ.  ಪರಂಪರೆ, ಆಧುನಿಕತೆ, ನಿಸರ್ಗ, ನಗರ ಇವುಗಳ ನಡುವಿನ ತಿಕ್ಕಾಟಗಳನ್ನು ಅವರ ವಾನಪ್ರಸ್ಥ ತೆರೆದಿಡುತ್ತದೆ. ಇದು ಸಂಶೋಧನಾತ್ಮಕ ಕೃತಿಯೂ ಹೌದು. ಸೃಜನಶೀಲ ಕೃತಿಯೂ ಹೌದು. ಕೃತಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ  ಅನುವಾದ ಮಾಡಿದ್ದಾರೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books