ಪುರೋಹಿತಶಾಹಿ ಮತ್ತು ಗುಲಾಮಗಿರಿ ಕೃತಿಯು ಸುಧಾರಕ ಜ್ಯೋತಿಬಾ ಫುಲೆ ಅವರ ಮೂಲ ಕೃತಿಯಾಗಿದ್ದು ಅದನ್ನು ಕನ್ನಡಕ್ಕೆ ಬಿ. ಶ್ರೀನಿವಾಸ ಅವರು ತಂದಿದ್ಧಾರೆ.
ಸುಧಾರಕ ಜ್ಯೋತಿಬಾ ಫುಲೆ ಅವರ ಕೃತಿ ಪುರೋಹಿತಶಾಹಿ ಮತ್ತು ಗುಲಾಮಗಿರಿ ಪುಸ್ತಕವನ್ನು ಸಾರ್ಥಕವಾಗಿ ಕನ್ನಡಕ್ಕೆ ತಂದವರು ಬಿ. ಶ್ರೀನಿವಾಸ. ಕೃತಿಯ ಹೆಸರು ಬ್ರಾಹ್ಮಣ್ಯವನ್ನು ಸೂಚಿಸುತ್ತಿದ್ದರೂ ಶತ ಶತಮಾನಗಳಿಂದ ಈ ಬ್ರಾಹ್ಮಣ್ಯ ಹೇಗೆ ಶೋಷಣೆ ಮಾಡಿತು ಎಂಬುದನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.
ಪುರೋಹಿತಶಾಹಿ ಅನುಕೂಲವಾಗುವ ರೀತಿಯಲ್ಲಿ ಪುರಾಣಗಳನ್ನು ರಚಿಸಿ ಒಂದು ಜನಾಂಗವು ಭೀತಿಯಲ್ಲಿಯೇ ಅವರ ಸೇವೆ ಮಾಡುವಂತೆ ಮಾಡಿದ್ದನ್ನು ಮನೋಜ್ಞವಾಗಿ ವರ್ಣೀಸಿದ್ದಾರೆ. ಹೊರ ಜಗತ್ತಿನಿಂದ ಬಂದ ಪುರೋಹಿತ ವರ್ಗದವರು ಈ ದೇಶದ ಬಹುಸಂಖ್ಯಾತ ದಲಿತರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ರೂಪಿಸಿದರು ಎಂದು ಲೇಖಕರು ಈ ಕೃತಿಯ ಮೂಲಕ ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡಿದ್ಧಾರೆ.
ಬ್ರಾಹ್ಮಣರ ವಾದಗಳು ಶೂದ್ರರ ಮನಸ್ಸಿನಲ್ಲಿ ಎಷ್ಟು ತಳವೂರಿದೆಯೆಂದರೆ - ಅಮೆರಿಕದ ನೀಗೊ ಗುಲಾಮರ ತರಹವೇ - ತಮ್ಮ ಬಿಡುಗಡೆಗಾಗಿ ಯತ್ನಿಸುವವರನ್ನೇ, ಅವರ ಪ್ರಯತ್ನಗಳನ್ನೇ ವಿರೋಧಿಸುತ್ತಾರೆ. ಶೋಷಿತರು ತಮ್ಮ ಹೀನಾಯ ಅಸ್ತಿತ್ವದ ಸ್ಥಿತಿಯನ್ನೇ ಒಪ್ಪಿ ಸುಮ್ಮನೇ ಬದುಕುವುದರ ಬಗ್ಗೆ ಈ ಕೃತಿ ಆಶ್ಚರ್ಯ ಹುಟ್ಟಿಸುತ್ತದೆ.
©2024 Book Brahma Private Limited.