ನಾನೇಕೆ ಹಿಂದೂ ಅಲ್ಲ

Author : ಮಂಗ್ಳೂರು ವಿಜಯ

Pages 184

₹ 140.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಬಹುದೊಡ್ಡ ದಲಿತ ಚಿಂತಕ ಆಂಧ್ರ ಪ್ರದೇಶ ಮೂಲದವರಾದ ಕಾಂಚ ಐಲಯ್ಯ ಅವರ ಕೃತಿ ’ನಾನೇಕೆ ಹಿಂದೂ ಅಲ್ಲ’. ಮಂಗ್ಳೂರು ವಿಜಯ ಇದನ್ನು ಕನ್ನಡಕ್ಕೆ ತಂದಿದ್ದಾರೆ. ತೊಂಬತ್ತರ ದಶಕದಲ್ಲಿ ಪ್ರಕಟವಾದ ಕೃತಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡದಲ್ಲಿ ಮುದ್ರಣವಾಗುತ್ತಿರುವುದು ಇದು ಎರಡನೇ ಬಾರಿ. 

ಸಾಮಾಜಿಕ ಚಿಂತನೆಗಳಿಗೆ ಹೆಸರಾದ ಐಲಯ್ಯ ಅವರು ’ಹಿಂದುತ್ವ’ ಕಳೆದ ಕೆಲವು ವರ್ಷಗಳಿಂದ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಶೂದ್ರರು ಮತ್ತು ದಲಿತರು ಹಿಂದುತ್ವದ ಭಾಗವಲ್ಲ ಎನ್ನವುದು ಅವರ ಪ್ರತಿಪಾದನೆ. ಹಿಂದುತ್ವದ ತತ್ವಜ್ಞಾನ, ಸಂಸ್ಕೃತಿ, ಮತ್ತು ರಾಜಕೀಯ ಅರ್ಥವ್ಯವಸ್ಥೆಯನ್ನು ತಳ ಸಮುದಾಯದವರ ಕಣ್ಣಿನಿಂದ ನೋಡುವ ಯತ್ನ ಕೃತಿಯದ್ದು. ತಮ್ಮ ಬದುಕಿನ ಉದಾಹರಣೆಗಳನ್ನೇ ಅವರು ಹೆಕ್ಕಿ ಕೃತಿಯಲ್ಲಿ ಜೋಡಿಸಿದ್ದಾರೆ. ಹೀಗಾಗಿ ಇದೊಂದು ಸ್ವಕಥನ ಕೂಡ.

About the Author

ಮಂಗ್ಳೂರು ವಿಜಯ

ಹಿರಿಯ ಲೇಖಕ, ಚಿಂತಕ ಮಂಗ್ಳೂರು ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಗಾರ, ಶಿಬಿರ ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಟಿಸಿದೆ.  ...

READ MORE

Related Books