ಅರುಂಧತಿ ರಾವ್ ಭಾರತದ ಪ್ರಮುಖ ಚಿಂತಕರು. ಇವರ ಚಿಂತನೆಗಳನ್ನು ಕನ್ನಡದ ಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜಾತಿ ವ್ಯವಸ್ಥೆ ಹಾಗೂ ಕಟ್ಟಕಡೆಯ ದಲಿತರು ಅನುಭವಿಸುವ ತಾರತಮ್ಯ ದೌರ್ಬಲ್ಯಗಳು, ಹಲವು ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಇದ್ದೂ ಇಲ್ಲದಿರುವುಕೆಯನ್ನು, ಸಂಸತ್ ಭವನದ ಮೇಲಿನದಾಳಿ ಆರೋಪಿ ಅಫ್ಜಲ್ ಗುರುವಿನ ಬಗೆಗಿನ ತೀರ್ಪು, ಮರಣದಂಡನೆ, ಕ್ಷಮಾದಾನ, ನಿರಾಕರಣೆ, ಬಂಡವಾಳ ಶಾಹಿ ವ್ಯವಸ್ಥೆ ಹೀಗೆ ಪ್ರಮುಖ ಸಂಗತಿಗಳ ಕುರಿತು ವಿವರಗಳನ್ನು ಒದಗಿಸಿದ್ದಾರೆ. ’ಸರ್ವರ ಒಳಿತಿಗಾಗಿ’ ಎಂಬ ಲೇಖನದಲ್ಲಿ ನರ್ಮದಾ ಯೋಜನೆಯನ್ನು ಮುಂದಿಟ್ಟುಕೊಂಡು, ಅಭಿವೃದ್ಧಿ ಹೆಸರಿನ ರಾಜಕಾರಣವು ಹೇಗೆ ಬುಡಕಟ್ಟು ಜನರನ್ನು, ಮೂಲೆಗುಂಪು ಮಾಡಿದೆ ಹಾಗು ಬಡವರನ್ನು ನಾಶಮಾಡಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ಭಯೋತ್ಪಾದನೆ , ಬೃಹತ್ ಅಣೆಕಟ್ಟುಗಳು, ಅಣುಬಾಂಬ್, ಯುದ್ಧ, ಕಾಶ್ಮೀರ, ಮಾವೋವಾದ, ಜಾತಿ ವ್ಯವಸ್ಥೆ ಹೀಗೆ ಪ್ರಮುಖ ಸಂಗತಿಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಅಭಿವೃದ್ಧಿ ರಾಜಕಾರಣ ದೇಶದ ಬುಡಕಟ್ಟು, ಜನರನ್ನು ಬಡವರನ್ನು ನಾಶ ಮಾಡುತ್ತಿವೆ ಎನ್ನುವುದನ್ನು ಎಚ್.ಎಸ್.ಅನುಪಮಾ ’ಮಿಡತೆಗಳಿಗೆ ಕಿವಿವೊಡ್ಡಿ’ ಎಂಬ ಕೃತಿಯಲ್ಲಿ ವಿವರಿಸುತ್ತಾರೆ.
©2024 Book Brahma Private Limited.