ಲೇಖಕರಾದ ಕೆ. ಬಾಲಗೋಪಾಲ್ ಅವರು ಬರೆದಿರುವ ಕೃತಿಯನ್ನು ಕನ್ನಡಕ್ಕೆ ತಂದು ಅನುವಾದಿಸಿದವರು ಬಿ.ಸುಜ್ಞಾನಮೂರ್ತಿ.
’ಮನುಸೃತಿ ಅಪರಾಧ- ಶಿಕ್ಷೆ’ ಕೃತಿಯು ಮನುಸ್ಮೃತಿ ಪ್ರಾಚೀನ ಭಾರತೀಯ ಸಮಾಜದ ಸಾಮಾಜಿಕ ವಿಧಿ-ನಿಷೇಧಗಳನ್ನು, ನೀತಿ-ನಡವಳಿಯ ಕಟ್ಟುಪಾಡುಗಳನ್ನು ಹೇಳುವ ಕುತೂಹಲಕಾರಿ ಕೃತಿಯಾಗಿದೆ. ಈ ಕೃತಿಯು ವರ್ಣಾಶ್ರಮ ಧರ್ಮವನ್ನು ಸಮಾಜದ ಎಲ್ಲ ವಲಯಗಳಲ್ಲಿ 'ಆಚರಿಸುವುದಕ್ಕೆ ಬಲವಂತ ಪಡಿಸುತ್ತದೆ. ಜಾತಿ ಮತ್ತು ಲಿಂಗಭೇದದ ತಾರತಮ್ಯದ ನೆಲೆಗಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು, ಸಮಾಜವನ್ನು ಕೆಟ್ಟದಾಗಿ, ಕೀಳಾಗಿ, 'ಅಸಹ್ಯವಾಗಿ ಚಿತ್ರಿಸಿದ ಜೀವವಿರೋಧಿ ಕೃತಿಯಾಗಿದೆ.
ಪ್ರಾಚೀನ ಭಾರತದಲ್ಲಿ ವರ್ಣವ್ಯವಸ್ಥೆಯನ್ನು ಸ್ಥಾಪಿಸಿದ, ಶಾಶ್ವತಗೊಳಿಸಿದ, ಆ ಮೂಲಕ ವೈದಿಕಶಾಹಿಯ ಮೇಲೆಯನ್ನು ಮೆರೆಸುವ ಮಾನವವಿರೋಧಿ ಕೃತಿಯೂ ಹೌದು. ಸಾಮಾಜಿಕ ತರತಮವನ್ನು, ಸಂಘರ್ಷವನ್ನು ಸಮಾಜದ ಮನೋಭಿತ್ತಿಯಲ್ಲಿ ಮಾನಸಿಕ ಹಿಂಸೆಯ ಮೂಲಕ, ಭೌತಿಕ ಹಿಂಸೆಯ ಮೂಲಕ ಬಿಂಬಿಸುವ ಮನುಪ್ರಣೀತ ಮನಸ್ಸುಗಳು ಸಾವಿರಾರು ವರ್ಷಗಳಿಂದ ಅವಿರತ ಪ್ರಯತ್ನವನ್ನು ಮಾಡುತ್ತಲೇ ಇವೆ.
©2024 Book Brahma Private Limited.