ಜಾತಿ ಪದ್ಧತಿಯ ವಿವಿಧ ಮುಖಗಳನ್ನು ಆಳವಾಗಿ ವಿಶ್ಲೇಷಿಸುವ ಡಾ. ರಾಮಮನೋಹರ ಲೋಹಿಯಾ ಅವರ ಹತ್ತೊಂಬತ್ತು ಲೇಖನಗಳ ಸಂಕಲನ 'ಜಾತಿ ಪದ್ಧತಿ'. ಹಸನ್ ನಯೀಂ ಸುರಕೋಡ ಅನುವಾದಿಸಿದ ಕೃತಿ ಕನ್ನಡ ವೈಚಾರಿಕ ಸಾಹಿತ್ಯಕ್ಕೊಂದು ಅಮೂಲ್ಯ ಸೇರ್ಪಡೆ. ಕಾಗೋಡು ಸತ್ಯಾಗ್ರಹದ ದಿನಗಳಿಂದಲೇ ಲೋಹಿಯಾ ಕರ್ನಾಟಕಕ್ಕೆ ಪರಿಚಿತರು. ಲೋಹಿಯಾ ಅವರ 'ರಾಜಕೀಯದ ಮಧ್ಯೆ ಬಿಡುವು', 'ಇತಿಹಾಸ ಚಕ್ರ’ ಮುಂತಾದ ಕೃತಿಗಳು ತುಂಬಾ ಜನಪ್ರಿಯವಾಗಿದೆ. ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದ ಮಹತ್ವದ ಕನ್ನಡ ಬರಹಗಾರರ ಮೇಲೆ ತುಂಬ : ಪ್ರಭಾವ ಬೀರಿರುವ ಲೋಹಿಯಾ ಅವರ ವಿಚಾರಗಳು ಇಂದಿಗೂ ಹಲವಾರು ತರುಣ ಬರಹಗಾರರ ಸ್ಫೂರ್ತಿಯ ಸೆಲೆಗಳಾಗಿವೆ. ಸಮಾಜವಾದಿ ಚಿಂತನೆ ಮತ್ತು ಚಳವಳಿಗಳಿಗೆ ಪ್ರೇರಕ ಶಕಿಯಾಗಿದ ಲೋಹಿಯಾ ಅವರನ್ನು ಕುರಿತು ಕನ್ನಡದಲ್ಲೂ ಅನೇಕ ಬರಹಗಳು ಪ್ರಕಟವಾಗಿವೆ. ಈ ಕೃತಿಯು ಆ ಸಾಲಿಗೆ ಸೇರುವಂತಹದ್ದು.
©2024 Book Brahma Private Limited.