ಅನ್ಯ ನಾಡುಗಳಲ್ಲಿ ಹೋಗಿ ಜೀತದಾಳುಗಳಾಗಿ ದುಡಿಯಲು (ಅಗ್ರಿಮೆಂಟ್ ಮೂಲಕ)ಬಂದವರನ್ನು ’ಗಿರಮಿಟಿಯಾ’ ಎಂದು ಕರೆಯುತ್ತಾರೆ. ಗಾಂಧಿಯವರ ದಕ್ಷಿಣ ಆಫ್ರಿಕಾದ ವಾಸ ಮತ್ತು ಅವರು ಅಲ್ಲಿ ನಡೆಸಿದ ಹೋರಾಟಗಳ ಕುರಿತು ಇಲ್ಲಿ ವಿವರಿಸಿದ್ದಾರೆ. ಆಫ್ರಿಕಾಕ್ಕೆ ಹೋದ ಗಾಂಧಿ ಅಲ್ಲಿನ ಭಾರತೀಯರ ಸ್ಥಿತಿಗತಿಗಳನ್ನು ಉತ್ತಮಪಡಿಸಲು, ವರ್ಣಬೇಧ ನೀತಿಯ ವಿರುದ್ಧ ಹೋರಾಟ ನಡೆಸಿದರು. ಹೋರಾಟ,ಉಪವಾಸ,ಸತ್ಯಾಗ್ರಹ, ಥಳಿತ,ಹೆಂಡತಿ ಮಕ್ಕಳು ಸಹ ಜೈಲು ಶಿಕ್ಷೆ, ಮುಸ್ಲಿಂ ಗೆಳೆಯರ ನೆರವಿನಿಂದ "ಟಾಲ್ ಸ್ಟಾಯ್ ಫಾರಂ" ಸ್ಥಾಪಿಸಿದ್ದು. ನಮ್ಮ ದೇಶದ ಆಧಾರ್ ಕಾರ್ಡನ್ನು ಹೋಲುವ ಪರ್ಮಿಟ್ ಗಳನ್ನು ಸುಟ್ಟದ್ದು, ಭಾರತೀಯರಿಗೆ ವಿಧಿಸುತ್ತಿದ್ದ ವಾರ್ಷಿಕ ತೆರಿಗೆ ರದ್ದುಗೊಳಿಸುವ ಹೋರಾಟ ಈಗೆ ಪ್ರಮುಖ ಸಂಗತಿಗಳ ಕುರಿತು ಇಲ್ಲಿ ವಿವರಗಳನ್ನು ನೀಡಲಾಗಿದೆ.
©2024 Book Brahma Private Limited.