ದಲಿತರು ಬರುವರು ದಾರಿಬಿಡಿ

Author : ಜಿ.ಎನ್. ಮೋಹನ್

Pages 38

₹ 30.00




Year of Publication: 2018
Published by: ಬಹುರೂಪಿ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 9945440841

Synopsys

ದಲಿತರ ನೋವಿನ ಲೋಕದ ಬಗ್ಗೆ ಪಿ. ಸಾಯಿನಾಥ್ ಅವರು ‘ದಿ ಹಿಂದೂ’ ಪತ್ರಿಕೆಗೆ ಬರೆದಿದ್ದ ಸರಣಿ ಲೇಖನಗಳನ್ನು ಜಿ.ಎನ್. ಮೋಹನ್‌ ಅವರು ಅನುವಾದ ಮಾಡಿದ್ದಾರೆ. 37 ಪುಟಗಳ ದಲಿತರ ಕಥನ ’ದಲಿತರು ಬರುವರು ದಾರಿ ಬಿಡಿ'. ಇದರಲ್ಲಿ ಮೂರು ಲೇಖನಗಳಿವೆ. ಈ ದೇಶದ ಸಂವಿಧಾನದ ಹಕ್ಕು ಹಾಗು ಕಾನೂನು ವ್ಯವಸ್ಥೆ ದಲಿತರಿಗೆ ಹೇಗೆ ಅನ್ವಯವಾಗುತ್ತಿದೆ ಎಂಬ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇಂದಿಗೂ ಜಾತಿ ನಿಂದನೆ, ಬಹಿಷ್ಕಾರ, ಅವಮಾನದಲ್ಲಿ ಬದುಕುತ್ತಿರುವ ದಲಿತರ ನೈಜ ಕಥನಗಳು ಈ ಕೃತಿಯಲ್ಲಿವೆ. 

About the Author

ಜಿ.ಎನ್. ಮೋಹನ್

ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಕನ್ನಡ ಪತ್ರಿಕೋದ್ಯಮದ ಪ್ರಮುಖರಲ್ಲೊಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ನುರಿತವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಜಾವಾಣಿಯ ವರದಿಗಾರರಾಗಿ, ಈಟಿವಿ ಚಾನಲ್ ನ ಹಿರಿಯ ಸಂಪಾದಕರಾಗಿ, ಸಮಯ ಚಾನಲ್ ಹಾಗೂ ಅವಧಿಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ಸೋನೆಮಳೆಯ ಸಂಜೆ', 'ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ' ಕವನ ಸಂಕಲನಗಳು, 'ನನ್ನೊಳಗಿನ ಹಾಡು ಕ್ಯೂಬಾ' (ಪ್ರವಾಸ ಕಥನ), 'ಕಾಫಿ ಕಪ್ಪಿನೊಳಗೆ ಕೊಲಂಬಸ್'(ವಿಚಾರ ಕಥನ) ಇವರ ಪ್ರಮುಖ ಕೃತಿಗಳು. ಸಾಹಿತ್ಯ, ನಾಟಕ, ...

READ MORE

Related Books