ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಸಾಗಿ ಬಂದಿದ್ದ ಹಾದಿಯಲ್ಲಿ ಭಿನ್ನ ಸಾಮಾಜಿಕ ಹಿನ್ನೆಲೆಯ ಮೂವರು ಮಿತ್ರರು (ಒಬ್ಬ ಚೀನಿ, ಭಾರತೀಯ ಮತ್ತು ಒಬ್ಬ ಅಮೆರಿಕನ್) ಪ್ರವಾಸ ಕೈಗೊಂಡು ಚೈನಾ-ಭಾರತ, ಇತಿಹಾಸ-ವರ್ತಮಾನ, ಕಮ್ಯುನಿಸ್ಟ್-ಪ್ರಜಾಪ್ರಭುತ್ವ, ಮತ್ತು ಜನಾಶಯ-ನಿರಾಶೆಗಳನ್ನು ವಿಶ್ಲೇಷಣೆಗೊಳಪಡಿಸಿ ಅನಾವರಣಗೊಳಿಸುವುದರೊಂದಿಗೆ ಪ್ರವಾಸದ ರಸಾಸ್ವಾದಗಳ ಅನುಭವವನ್ನೂ ಮೇಳೈಸಿದ ಕೃತಿ- ವೂಶಿಯನ್ ಡಿ ಲ್ಯುಲಾಂಗ್ಚ, ಯಾನೆ ಅಗಣಿತ ಅಲೆಮಾರಿ ಉರ್ಫ್ The Infinite Wanderer!
ಚೈನಾದ ಕಮ್ಯುನಿಸ್ಟ್ ಸರ್ಕಾರ ಹೇಗೆ ತನ್ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಂಡವಾಳಶಾಹಿಯಾಗಿದೆ ಮತ್ತು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕುಗಳು ಮೂಲಭೂತವಾಗಿಯೇ ಹೇಗೆ ಅನುಷ್ಠಾನದಲ್ಲಿ ಚ್ಯುತಿಗೊಂಡು ಅಸಂವಿಧಾನಿಕವಾಗಿವೆ ಎಂದು ವಾಸ್ತವ ಘಟನೆಗಳ ಮೂಲಕ ತೆರೆದಿಡುತ್ತ ಚಿಂತನೆಗೆ ಹಚ್ಚುವ ಕೃತಿ ಇದು.
ಈ ಹಿನ್ನೆಲೆಯಲ್ಲಿ ಚೈನಾದ ಅಭಾಸಗಳನ್ನು, ಭಾರತದ ವಿಪರ್ಯಾಸಗಳನ್ನು ಆಯಾಯ ದೇಶಗಳ ಸೈದ್ಧಾಂತಿಕ ಆಡಳಿತ ವ್ಯವಸ್ಥೆಯ ಪರಿಮಿತಿಯಲ್ಲೇ ತೆರೆದಿಡುವ ಕನ್ನಡದ ಏಕೈಕ ಕೃತಿ, ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)!
©2024 Book Brahma Private Limited.