ಭಾರತದ ಖ್ಯಾತ ಅಂಕಣಕಾರ ಮುಜಫರ್ ಹುಸೇನ್ ಹಿಂದಿ, ಮರಾಠಿ, ಗುಜರಾತಿ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಪ್ರಖ್ಯಾತ ಲೇಖಕ ಹಾಗೂ ಚಿಂತಕ. ಭಾರತದ 42 ಪತ್ರಿಕೆಗಳಲ್ಲಿ ಅವರ ಸಾಪ್ತಾಹಿಕ ಅಂಕಣಗಳು ಪ್ರಕಟಗೊಳ್ಳುತ್ತಿವೆ. ಮಧ್ಯ ಪ್ರಾಚ್ಯ, ಪಾಕಿಸ್ತಾನ ಹಾಗೂ ಭಾರತದ ಮುಸ್ಲಿಮರ ಕುರಿತು ಅವರು ಹೆಚ್ಚಾಗಿ ಬರೆಯುತ್ತಾರೆ. ರಾಜಸ್ಥಾನದ ಬಿಜೋಲಿಯನ್‌ನಲ್ಲಿ 27 ಜುಲೈ 1945ರಲ್ಲಿ ಜನಿಸಿದ ಮುಜಫರ್, ಮಧ್ಯಪ್ರದೇಶದಲ್ಲಿ ಕಲಾಪದವಿ ಪೂರ್ಣಗೊಳಿಸಿದರು. ಮುಂಬೈಗೆ ಬಂದು ಕಾನೂನು ಶಿಕ್ಷಣ ಪಡೆದರು. ಪತ್ರಿಕೋದ್ಯಮವನ್ನೂ ಅಧ್ಯಯನ ಮಾಡಿದರು. “ಮುಸ್ಲಿಂ ಮಾನಸ್, ಸಮಾನ ನಾಗರಿಕ ಕಾನೂನ್, ಕಾಶ್ಮೀರ್: ಕಲ್ ಔರ್ ಆಜ್, ಸದ್ದಾಮ್ ಹುಸೇನ್ ಔರ್ ಖಾದಿ ಸಮಸ್ಯಾ, ದಂಗೋಮೇ ಜಲೀ ಮುಂಬೈ, ಇನ್ ಸೈಟ್ ಇನ್ ಟು ಮೈನಾರಿಟಸಂ” ಇತ್ಯಾದಿ ಅವರ ಪ್ರಸಿದ್ಧ ಕೃತಿಗಳು.
ಕಾಶಿ ಪ್ರಚನ್ಯ ಸಭಾದಿಂದ ಸಾಹಿತ್ಯ ರತ್ನ, 2002ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಡಾ.ಹೆಡಗೇವಾರ್ ಪ್ರಜ್ಞಾ ಪುರಸ್ಕಾರ್, ರಾಜಮತಾ ಪತ್ರಕಾರಿಕಾ ಪುರಸ್ಕಾರ್, ಶಾಕಾಹಾರ ಪುರಸ್ಕಾರ್, ರಾಮಮನೋಹರ್ ತ್ರಿಪಾಠಿ ಪುರಸ್ಕಾರ್ ಕೇಸರಿ, ಪ್ರಶಸ್ತಿ ಪುರಸ್ಕಾರ್, ಪತ್ರಕಾರ್ ಕೇಸರಿ ಇತ್ಯಾದಿ ಪ್ರಶಸ್ತಿಗಳು ಇವರಿಗೆ ಲಭಿಸಿವೆ.