ನೀವೇ ಲೋಕ ನಿಮ್ಮೊಳಗೇ ಲೋಕ

Author : ಮಹಾಬಲೇಶ್ವರ ರಾವ್

Pages 152

₹ 100.00




Year of Publication: 2014
Published by: ವಸಂತ ಪ್ರಕಾಶನ
Address: ವಸಂತ ಪ್ರಕಾಶನ, 3ನೇ ಬ್ಲಾಕ್ ಜಯನಗರ, ಬೆಂಗಳೂರು

Synopsys

ಯುವಜನತೆಯಲ್ಲಿ ಇಂದು ತೀವ್ರಸ್ವರೂಪದ ಅತೃಪ್ತಿ, ಹತಾಶೆ ಮನೆಮಾಡಿದೆ. ಈ ಸ್ಥಿತಿಗೆ ಪ್ರತಿಸ್ಪಂದಿಸುವ ಜೆ.ಕೆ. ಅವರ ಮಾತುಗಳು ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೆ ಗುರು ಮತ್ತು ತನಗೆ ತಾನೆ ಶಿಷ್ಯನಾಗಬೇಕೆಂದು ನಿರ್ದೇಶಿಸುತ್ತವೆ. ಕೃಷ್ಣಮೂರ್ತಿ ಅವರು ಪ್ರತಿಪಾದಿಸುವ ಬಿಡುಗಡೆ ದೊರೆಯಬೇಕಾದರೆ ವ್ಯಕ್ತಿಯ ಮನೋಲೋಕದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು. ತನ್ನಲ್ಲಿರುವ ಜ್ಞಾನವನ್ನು ಮನಸ್ಸು ಬರಿದುಮಾಡಿಕೊಂಡಾಗ ಮನುಷ್ಯನಲ್ಲಿ ಆಮೂಲಾಗ್ರ ಪರಿವರ್ತನೆಗೆ ದಾರಿ ಈ ಪುಸ್ತಕದಲ್ಲಿ ಕಂಡುಕೊಳ್ಳಬಹುದು. ಜಿ.ಕೆ. ಅವರ ವಿಚಾರಗಳನ್ನು ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books