ಆಂಧ್ರಪ್ರದೇಶದ ಹಿರಿಯ ಐ.ಎ.ಎಸ್. ಅಧಿಕಾರಿಯಾದ ವಿದ್ಯಾಸಾಗರ್ ತೆಲುಗು ಸಾಹಿತ್ಯದ ಪ್ರಬುದ್ಧ ಲೇಖಕರು. ಮಾನವೀಯ ಅಂತಃಕರಣವುಳ್ಳವರಾಗಿ ಸಾರ್ವಜನಿಕ ಆಡಳಿತದಲ್ಲಿ ದಮನಿತರ ದನಿಯಾಗಿ ದುಡಿಯುತ್ತಿರುವ ವಿಶಿಷ್ಟ ವಕ್ತಿತ್ವ ಹೊಂದಿರುವವರು. ಅಧ್ಯಯನವೇ ಅವರ ಸಂಸ್ಕಾರ, ಬದುಕಿನಲ್ಲಿ ಸಾತ್ವಿಕತೆ ಉಂಡು ಬರಹದಲ್ಲಿ ಸೃಜನಶೀಲತೆ ಗಳಿಸಿ ಕೊಂಡವರು. ಗಿರಿಜನರ ಕಲ್ಯಾಣ ಕಾರ್ಯಗಳಲ್ಲಿ ದುಡಿಯುತ್ತಿರುವಾಗ ಅವರ ಸುತ್ತಮುತ್ತಲಿನ ಪರಿಸರ, ಅನುಭವ ಶಿಕ್ಷಣಗಳಿಗೆ ಮಾರುಹೋದವರು. ಅವುಗಳೆಲ್ಲದರ ಸತ್ಸಲ ಮೊತ್ತವಾಗಿ ಬಂದಿರುವ 'ಭದ್ರಾಚಲಂ ಮನ್ಸೆಂ ಕಥಲು' ಕೃತಿ ತೆಲುಗು ಸಾಹಿತ್ಯದಲ್ಲೊಂದು ಮನ್ವಂತರವನ್ನೇ ತೆರೆದಿಟ್ಟಿದೆ. ವಿದ್ಯಾಸಾಗರ್ ಕಾಡಿನವರ ಸಂಸ್ಕೃತಿಯನ್ನು ನಾಡಿನವರಿಗೆ ಪರಿಚಯಿಸುವ ಪ್ರಯತ್ನದಲ್ಲಿ ಯಶಸ್ವಿಯನ್ನು ಸಾಧಿಸಿದ್ದಾರೆ. ಈ ಕೃತಿಯ ಕನ್ನಡ ಅನುವಾದವೇ ’ಕೂಗಿರದ ಪ್ರತಿಧ್ವನಿ’.
©2024 Book Brahma Private Limited.