ಕೋರೆಗಾವ ಕದನ-ದಲಿತ ದಿಗ್ವಿಜಯ

Author : ಸಿದ್ರಾಮ ಕಾರಣಿಕ

Pages 72

₹ 50.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಮರಾಠಿ ಲೇಖಕರಾದ  ಸುಧಾಕರ ಖಾಂಬೆ ಅವರ ಕೃತಿಯನ್ನು ಕನ್ನಡಕ್ಕೆ  ಡಾ. ಸಿದ್ರಾಮ ಕಾರಣಿಕ ಅವರು ’ ಕೋರೆಗಾವ ಕದನ-ದಲಿತ ದಿಗ್ವಿಜಯ’ ಪುಸ್ತಕವನ್ನು ಹೊರತಂದಿದ್ದಾರೆ. 

ನಮ್ಮ ದೇಶದ ಇತಿಹಾಸದುದ್ದಕ್ಕೂ ದಮನಿತ ಸಮುದಾಯಗಳು ಆಕ್ರಮಿಸಲು ಬರುವ ಪರರಾಜ್ಯದ ಶತ್ರುವನ್ನು ತಮ್ಮ ಬಿಡುಗಡೆಯ ದಾರಿ ತೋರಿಸಿಯಾನೆಂದು ಭಾವಿಸಿ ಬೆಂಬಲಿರುವ ಎಷ್ಟೋ ಉದಾಹರಣೆಗಳಿವೆ. ಬ್ರಿಟಿಷರ ಕುರಿತು ತಳಸಮುದಾಯಗಳು ಇಂಥ ಭಾವನೆ ಹೊಂದಿದ್ದರೆ ಏನೂ ಆಶ್ಚರ್ಯವಿಲ್ಲ ಎಂದು ಅಂಬೇಡ್ಕರ್ ನೇರ ಮಾತುಗಳಲ್ಲಿ ಹೇಳಿದ್ದರು. ಬರೀ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಸಿಗುವ ಸ್ವಾತಂತ್ರ್ಯದಿಂದ ಈ ದೇಶದ ತಳ ಸಮುದಾಯಗಳಿಗೆ ಯಾವ ಪ್ರಯೋಜನವೂ ಇಲ್ಲ. ಮಲೆತು ನಿಂತ ನೀರಿನಂತಾಗಿರುವ ಸಮಾಜ ವ್ಯವಸ್ಥೆ ಬದಲಾದರೆ ಮಾತ್ರ ದಮನಿತನಿಗೆ ಸ್ವಾತಂತ್ರ್ಯ ಬಂದಂತೆ ಎಂದು ಅವರು ಹೇಳುತ್ತಿದ್ದರು. ಬ್ರಿಟಿಷರು ಈ ದೇಶವಾಸಿಗಳಿಗೆ ದೇಶವೊಪ್ಪಿಸಿ ಹೋಗುವ ಮೊದಲು ತಳಸಮುದಾಯಗಳು ಸಾಧ್ಯವಾದಷ್ಟನ್ನು ಕಾನೂನು ರೀತ್ಯಾ ಪಡೆದುಕೊಳ್ಳಬೇಕೆಂದು ಭಾವಿಸಿ ರಾಜಕೀಯ ಹೋರಾಟಕ್ಕೊಂದು ನೆಲೆ ಒದಗಿಸಿದರು. ಆದರೆ ಅಂಬೇಡ್ಕರರ ರಾಜಕೀಯ ಹೋರಾಟ, ಬ್ರಿಟಿಷರ ಜೊತೆಗೆ ನಡೆಸಿದ ವಾದ-ಚೌ ಕಾತಿಗಳೆಲ್ಲ “ದೇಶಭಕ್ತ'ರಿಂದ ದ್ರೋಹದ ಪಟ್ಟ ಪಡೆದವು. ಇವುಗಳ ಹಿನ್ನೆಲೆಯಲ್ಲಿ ರಚಿತವಾದ ಕೃತಿ ’ ಕೋರೆಗಾವ ಕದನ -ದಲಿತ ದಿಗ್ವಿಜಯ’. 

About the Author

ಸಿದ್ರಾಮ ಕಾರಣಿಕ

ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸಿದ್ರಾಮ ಕಾರಣಿಕ ಅವರು 'ದಲಿತ ಬಂಡಾಯ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎಂಬ ವಿಷಯ ಕುರಿತ ಸಂಶೋಧನೆಗೆ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕವನ, ಕತೆ, ಅನುವಾದ, ನಾಟಕ, ಲೇಖನ ಸಂಗ್ರಹ ಸೇರಿದಂತೆ ಇದುವರೆಗೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ. ಸೂರ್ಯಕಾಂತಿ ಎಂಬ ಸಿನಿಮಾ ಸೇರಿದಂತೆ ಸಿನಿಮಾ ಮತ್ತು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಅಕ್ಟೋಬರ್ 21, 2021 ರಂದು ನಿಧನರಾದರು.  ಕೃತಿಗಳು: ದಲಿತ ಅಸ್ಮಿತೆ, ದೇವದಾಸಿ ಬೆತ್ತಲೆ ಸೇವೆ, ದಲಿತ ದಿಗ್ವಿಜಯ ...

READ MORE

Related Books