ಆಂಗ್ಲ ಲೇಖಕ ಹೋಸೆ ಒರ್ಟೆಗಾ ಯಿ ಗಾಸೆತ್ ಅವರು ಪತ್ರಿಕೆಗಳಲ್ಲಿ ಬರೆದ ಅಂಕಣಗಳ ಸಂಗ್ರಹ ಕೃತಿ- ‘ದಿ ರಿವೋಲ್ಟ್ ಆಫ್ ದಿ ಮಾಸಸ್’. ಲೇಖಕ ಕೆ.ಎನ್. ವೆಂಕಟಸುಬ್ಬರಾವ್ ಅವರು ‘ಜನಸಮೂಹದ ದಂಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.ಮೂಲ ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ಈ ಅಂಕಣ ಬರಹಗಳು 1930 ರಲ್ಲಿ ಇಂಗ್ಲಿಷ್ ರೂಪು ಪಡೆದು ಪ್ರಕಟಗೊಂಡವು. ನಂತರ ವಿವಿಧ ಪ್ರಕಾಶನಗಳು ವಿವಿಧ ಭಾಷೆಗಳಲ್ಲಿ ಪ್ರಕಟಗೊಳಿಸಿದವು. ಸಮಾಜದ ಮೇಲಿನ ಅಧಿಕಾರಗಳನ್ನು ಜನಸಮೂಹಗಳು ಹೇಗೆ ಸ್ವೀಕರಿಸಿ, ಪ್ರತಿಕ್ರಿಯಿಸುತ್ತವೆ ಎಂಬುದು ಇಲ್ಲಿಯ ಎಲ್ಲ ಬರಹಗಳ ಜೀವಾಳ. ಮಾತ್ರವಲ್ಲ; ‘ಮನುಷ್ಯ ಹಾಗೂ ಸಮೂಹ’ ಈ ಎರಡರ ಪರಿಕಲ್ಪನೆಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಸಹ ಗುರುತಿಸುತ್ತವೆ; ಅವುಗಳ ಅನಾಗರಿಕತೆಯನ್ನು ಬಯಲು ಮಾಡುತ್ತವೆ. ಸಮೂಹವು ಯಾವಾಗಲೂ ಉದ್ರಿಕ್ತವಾಗಿಯೇ ಪ್ರತಿಕ್ರಿಯಿಸುತ್ತದೆ ಏಕೆ ...ಎಂಬ ವಿಚಾರಗಳೂ ಸೇರಿದಂತೆ ಸಮೂಹದ ಸ್ವಭಾವ-ಸ್ವರೂಪವನ್ನು ಲೇಖಕರು ತಮ್ಮ ಬರಹಗಳ ಮೂಲಕ ತೋರಿದ್ದಾರೆ.
©2024 Book Brahma Private Limited.