ದೇವರು ಎಂಬ ಸಂಕೇತ ನಾಮ

Author : ಕೆ. ಪುಟ್ಟಸ್ವಾಮಿ

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಒಂದು ನಿಟ್ಟಿನಿಂದ ನೋಡಿದರೆ ಆತ್ಮಕತೆಯಂತೆ, ಮತ್ತೊಂದು ನೆಲೆಯಿಂದ ಗ್ರಹಿಸಿದರೆ ಭೌತಶಾಸ್ತ್ರದ ಕಗ್ಗದಂತೆ, ಇವೆರಡೂ ಅಲ್ಲದ ಬೇರೊಂದು ಕೋನದಿಂದ ಕಂಡರೆ ತತ್ವಜ್ಞಾನದ ಜಿಜ್ಞಾಸೆಯಂತೆ ಕಾಣುವ ಕೃತಿ ಮಣಿ ಭೌಮಿಕ್ ಅವರ ’ಕೋಡ್‌ ನೇಮ್‌ ಗಾಡ್‌’. ಕೃತಿಯ ಕುರಿತು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಹೀಗೆ ಹೇಳಿದ್ದಾರೆ: “ ಕೋಡ್ ನೇಮ್ ಗಾಡ್' ಎಂಬ ಶೀರ್ಷಿಕೆಯ ನಿಮ್ಮ ಕೃತಿಯನ್ನು ಓದಿದ್ದೇನೆ. ಜಗತ್ತಿನ ಶ್ರೇಷ್ಠ ಆಧ್ಯಾತ್ಮಿಕ ಚಿಂತನಾ ಪರಂಪರೆಗಳ ಏಕಮೂಲವು ವೈಜ್ಞಾನಿಕ ವಾಸ್ತವಗಳನ್ನು ಆಧರಿಸಿವೆ ಎಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ’ ಎಂದಿದ್ದಾರೆ. 

'ಈ ಪುಸ್ತಕವನ್ನು ಒಮ್ಮೆ ಕೈಗೆತ್ತಿಕೊಂಡ ನಂತರ ಅದನ್ನು ಕೆಳಗಿಡಲು ಮನಸ್ಸೇ ಬರಲಿಲ್ಲ. ಇದೊಂದು ವಿನಮ್ರವಾದ ಅನುಭವ ಮತ್ತು ಈ ಪುಸ್ತಕವು ನಿಮ್ಮ ಬದುಕನ್ನು ಬದಲಿಸಬಲ್ಲದು.” ಎಂದವರು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್. 

ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಬರಹಗಾರ ಡಾ. ಕೆ. ಪುಟ್ಟಸ್ವಾಮಿ. 

About the Author

ಕೆ. ಪುಟ್ಟಸ್ವಾಮಿ

ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಕನಕಪುರ ಕೆ.ಜಿ.ಎಫ್ ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ.  ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ...

READ MORE

Related Books