ಹಿರಿಯ ಲೇಖಕ ಡಾ. ಎಸ್.ಎನ್. ಬಾಲಗಂಗಾಧರ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ಪ್ರೊ. ರಾಜಾರಾಮ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಬೌದ್ಧಿಕ ದಾಸ್ಯದಲ್ಲಿ ಭಾರತ. ಭಾರತವು ವಿಶ್ವದಲ್ಲೇ ಅತ್ಯುನ್ನತ ವಿಚಾರ-ಚಿಂತನೆಗಳಿದ್ದರೂ ಅವುಗಳು ವ್ಯಾಪಕ ಪ್ರಚಾರವಿಲ್ಲ. ಅಷ್ಟಕ್ಕೂ, ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನವಿಲ್ಲ. ಇದ್ದರೂ, ಅದನ್ನು ಹೇಗೆ ವ್ಯಾಪಕಗೊಳಿಸಬೇಕು ಎಂಬುದರ ಮಾಹಿತಿ ಕೊರತೆ ಹೀಗೆ ಹತ್ತು ಹಲವು ಅಡೆ-ತಡೆಗಳ ಪೈಕಿ ಬಹುತೇಕ ಅಡೆತಡೆಗಳು ಸ್ವಯಂಕೃತ ಅಪರಾಧಗಳ ಸ್ವರೂಪವನ್ನು ಹೋಲುತ್ತವೆ.
ಬ್ರಿಟಿಷರು ಉತ್ತಮರು, ಪ್ರಗತಿಪರರು ಎಂದು ತಿಳಿದು, ಅವರ ಸಂಸ್ಕೃತಿಯನ್ನು ಸ್ವೀಕರಿಸುವ ಧಾವಂತದಲ್ಲಿ ಭಾರತೀಯ ಸಂಸ್ಕೃತಿಯನ್ನೇ ಕಡೆಗಣಿಸುತ್ತಿರುವುದರ ಪರಿಣಾಮ ಭಾರತದ ಬೌದ್ಧಿಕತೆಯು ದಾಸ್ಯದಲ್ಲಿ ನರಳುತ್ತಿದೆ. ಇಂತಹ ಸಂಗತಿಗಳ ಚಿಂತನೆಗಳು ಈ ಕೃತಿಯಲ್ಲಿ ಹೆಪ್ಪುಗಟ್ಟಿವೆ.
©2024 Book Brahma Private Limited.