ಅಮೆರಿಕ ಕೇವಲ ಒಂದು ದೇಶವಲ್ಲ. ಉಳಿದ ದೇಶಗಳದ್ದೇ ಒಂದು ತೂಕವಾದರೆ ಅದರದ್ದೇ ಒಂದು ತೂಕ. ಹಾಗಾಗಿಯೇ ಅದು ವಿಶ್ವದ ಇತರರ ಪಾಲಿಗೆ ದೊಡ್ಡಣ್ಣ. ಅಷ್ಟೇ ಆಗಿದ್ದಿದ್ದರೆ ಚಿಂತೆ ಇರುತ್ತಿರಲಿಲ್ಲ ಆದರೆ ಅಮೆರಿಕ ದುಷ್ಟತೆಯನ್ನೂ ಮೈಗೂಡಿಸಿಕೊಂಡಿದೆ, ಅದು ಇತರರನ್ನು ಕಾಡುತ್ತಿದೆ ಎಂಬುದು ’ಅಮೆರಿಕನಿಜಂ’ ಕೃತಿಯ ಮೂಲ ಲೇಖಕರಾದ ರಾಣಿ ಶಿವಶಂಕರಶರ್ಮ ಅವರ ಅಭಿಪ್ರಾಯ. ರಾಜಕೀಯ ತತ್ವಶಾಸ್ತ್ರದ ಫಸಲು ಎಂದೇ ಕೃತಿ ಬಿಂಬಿತ.
’ಅಮೆರಿಕನಿಜಂ’ ಎಂದರೆ ಜಾಗತೀಕರಣ, ಏಕಸ್ವಾಮ್ಯತೆ, ಏಕರೂಪತೆ ಎಂಬ ಆತಂಕ ಲೇಖಕರದ್ದು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯವನ್ನುಅಮೆರಿಕನಿಜಂ ಭ್ರಷ್ಟಗೊಳಿಸುತ್ತಿರುವುದನ್ನು ಕೃತಿಕಾರರು ಗಮನಿಸಿದ್ದಾರೆ.
ಯುರೋಪಿಯನಿಜಂ ಮತ್ತು ಅಮೆರಿಕನಿಜಂ ನಡುವಿನ ವ್ಯತ್ಯಾಸವನ್ನು ಹೇಳುತ್ತಾ, ಯುರೋಪಿಯನಿಜಂ ಹೊಚ್ಚ ಹೊಸ ಸರಕುಗಳಿಂದ ವ್ಯಾಪಾರ ಮಾಡಿದರೆ, ಅಮೆರಿಕನಿಜಂ, ಹೊಚ್ಚ ಹೊಸ ಆಲೋಚನೆಗಳನ್ನೇ ಸರಕುಗಳಾಗಿ ಚಲಾಚವಣೆಗೆ ತರುತ್ತಿದೆ ಎನ್ನುತ್ತಾರೆ. ಭಾರತೀಯತೆಯೂ ಅಮೆರಿಕನಿಜಂ ಜೊತೆಗೆ ಸೇರಿಕೊಂಡ ಪರಿಯನ್ನುಅವರು ಆಸಕ್ತಿಕರವಾಗಿ ಮಂಡಿಸಿದ್ದಾರೆ.
©2024 Book Brahma Private Limited.