ಶ್ರೀರಾಮ ಇಟ್ಟಣ್ಣವರ ಅವರ ಕುಟುಂಬದ ಹಿರಿಯರ ವರ್ಧಂತಿ ಸಂದರ್ಭದಲ್ಲಿ ಹೊರಬಂದ ಅಭಿನಂದನಾ ಗ್ರಂಥ-ವಾತ್ಸಲ್ಯ. ಲೇಖಕ ವಸಂತ ಕುಲಕರ್ಣಿ ಅವರು ಕೃತಿಗೆ ಮುನ್ನುಡಿ ಬರೆದು ‘ಇದು ಲೇಖನ ಕವಿತೆಗಳ ಮೂಲಕ ಸಾಹಿತ್ಯಿಕ ಸ್ಪಂದನಗಳನ್ನು ಪಡೆದುಕೊಂಡಿದೆ. ಕೌಟುಂಬಿಕ ಮೌಲ್ಯಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಈ ಅಭಿನಂದನಾ ಗ್ರಂಥಕ್ಕೆ ಸಾಮಾಜಿಕ ಮಹತ್ವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಂಥ ಸಂಪಾದಕ ಡಾ. ಶ್ರೀ ರಾಮ ಇಟ್ಟಣ್ಣವರ ಅವರು, ಗ್ರಂಥವನ್ನು ಕೇವಲ ಕೌಟುಂಬಿಕ ನೆಲೆಯಲ್ಲೇ ನಿಲ್ಲಿಸದೆ, ಸಾರ್ವತ್ರಿಕ ರೂಪ ಕೊಟ್ಟಿರುವುದು ಈ ಪುಸ್ತಕದ ವಿಶೇಷತೆ ಆಗಿದೆ. ಕುಲಕರ್ಣಿ ಕುಟುಂಬದ ಸದಸ್ಯರೆಲ್ಲ ಪರಸ್ಪರ ವಾತ್ಯಲ್ಯದ ತೋಳ್ತೆಕ್ಕೆಯಲ್ಲಿ ಒಂದು ಗೂಡಿಯೇ ಇರುವುದು ಹೆಮ್ಮೆ ತಂದ ವಿಷಯವಾಗುತ್ತದೆ ಎಂಬುದನ್ನು ಈ ಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.