ಡಾ,ಸಿ ಬಿ ಹೊನ್ನುಸಿದ್ದಾರ್ಥ ಹಾಗೂ ಡಾ,ವಡ್ಡೆ ಹೇಮಲತಾ ಅವರ ಸಂಪಾದನೆಯ ಕೃತಿ ಯಂತ್ರ -ಮಂತ್ರ. ಈ ಕೃತಿಯು ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತುತವಾಗುವಲ್ಲಿ ಎರಡು ಮಾತಿಲ್ಲ .ಹಸ್ತಪ್ರತಿಕಾರ ಹೇಳಿರುವ ಎಷ್ಟೋ ಔಷದಿಗಳು ನಾಟಿ ವೈದ್ಯದಲ್ಲಿ ಬಳಕೆಯಾಗುತ್ತದೆ.ಹಲವಾರು ನೋವುಗಳಿಗೆ ಔಷಧಗಳನ್ನು ತಿಳಿಸುವುದರ ಮುಖಾಂತರ ಪರಿಹಾರವನ್ನು ಈ ಹಸ್ತಪ್ರತಿಯಲ್ಲಿ ನೀಡಿದ್ದಾನೆ.ಹಾಗೆಯೇ ಮಂತ್ರ,ಯಂತ್ರಗಳ ಕುರಿತು ಸಾಕಷ್ಟು ತಿಳಿಸಿದ್ದಾನೆ.ಆರಂಭದಲ್ಲಿ ಮಂತ್ರ- ಯಂತ್ರಕ್ಕೆ ಮಾತ್ರ ಸೀಮಿತವಾಗಿರಬಹುದೆಂದು ತೆಗೆದುಕೊಂಡ ಇದು, ರಜಸ್ವಲೆ,ಗಂಡನೊಲ್ಲದವರಿಗೆ,ಮಕ್ಕಳು ಹುಟ್ಟುಟ್ಟಿ ಸಾಯುವವರಿಗೆ ,ರಕ್ತಸ್ರಾವವಾಗು ಮಹಿಳೆಯರಿಗೆ ಯಂತ್ರಹಳ ,ಔಷಧಗಳ ಮೂಲಕ ಪರಿಹಾರವನ್ನು ನೀಡುತ್ತಾನೆ.ಇದು ಇಂದಿನ ವೈಜ್ಞಾನಿಕ ಅದ್ಯಯನ ಮಾಡುತ್ತಿರುವ ಹೋಮಿಯೋಪತಿ, ಆಯರ್ವೇದಿಕ್,ನಾಟಿ ವೈದ್ಯರಿಗೆ ಕೈಪಿಡಿಯಂತಿದೆ.
©2024 Book Brahma Private Limited.