‘ಬಸವರಾಜ ಕಟ್ಟೀಮನಿ ಸಾಹಿತ್ಯ ವಾಚಿಕೆ’ ಬಸವರಾಜ ಕಟ್ಟೀಮನಿ ಅವರ ಶತಮಾನೋತ್ಸವದ ನೆನಪಿನಲ್ಲಿ ಪ್ರಕಟವಾದ ಮಹತ್ವದ ಕೃತಿ. ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಸಂಪಾದಿಸಿದ್ದಾರೆ. ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಡಾ.ಎಂ. ಎಂ. ಕಲಬುರ್ಗಿಯವರು ಪ್ರತಿಷ್ಠಾನಕ್ಕೆ ಗಟ್ಟಿ ನೆಲೆಗಟ್ಟು ಒದಗಿಸಿ ಬಸವರಾಜ ಕಟ್ಟೀಮನಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಹೊರತಂದಿದ್ದರು. ಈಗ ಅವರ ಸಾಹಿತ್ಯವನ್ನು ಜನಸಮ್ಮುಖಗೊಳಿಸುವ ಜವಾಬ್ದಾರಿಯನ್ನು ಪ್ರತಿಷ್ಠಾನ ನಿರ್ವಹಿಸುತ್ತಿದೆ.
ಬಸವರಾಜ ಕಟ್ಟೀಮನಿಯವರ ಕೃತಿಗಳು ಮರು ಓದಿಗೆ, ಅವಲೋಕನಕ್ಕೆ ಒಳಪಡಲಿ ಎಂಬುದೇ ಪ್ರತಿಷ್ಠಾನದ ಆಶಯವಾಗಿದೆ. ಬಸವರಾಜ ಕಟ್ಟೀಮನಿಯವರ ಕೃತಿಗಳಿಗೆ ಒಂದು ಪ್ರವೇಶಿಕೆಯಾಗಿ ಬಸವರಾಜ ಕಟ್ಟೀಮನಿ ಸಾಹಿತ್ಯ ವಾಚಿಕೆಯನ್ನು ಪ್ರಕಟವಾಗಿದೆ. ಇಲ್ಲಿ ಕಟ್ಟೀಮನಿ ಕೃತಿಗಳನ್ನು ಕುರಿತು ವಿಚಾರ ಸಂಕಿರಣ, ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ಹೊಸ ಓದುಗರಿಗೆ ಒಂದು ಸ್ಥೂಲ, ಪ್ರಾಥಮಿಕ ಪರಿಚಯ ಇರಲಿ ಎಂಬುದು ಇದರ ಉದ್ದೇಶ.
ಡಾ. ಬಾಳಣ್ಣ ಶೀಗೀಹಳ್ಳಿ ಅವರು ಕನ್ನಡ ಪ್ರಾಧ್ಯಾಪಕರಾಗಿ, ರಂಗಚಿಂತಕರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಸಂಪಾದಕರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಅವರು ಪ್ರತಿಷ್ಠಾನಕ್ಕೆ ಈ ವಾಚಿಕೆಯನ್ನು ಸಿದ್ಧಪಡಿಸಿದ್ದಾರೆ.
©2024 Book Brahma Private Limited.