‘ಶಹಪುರ ದರ್ಶನ’ ಲೇಖಕ ಸೂಗಯ್ಯ ಹಿರೇಮಠ ಅವರು ಸಂಪಾದಿಸಿರುವ ಕೃತಿ. ಇದು ಶಹಪುರ ತಾಲೂಕಿನ ಪ್ರಾಚೀನ ಐತಿಹಾಸಿಕ, ವಾಸ್ತುಶಿಲ್ಪ, ಶಾಸನ, ಮಹತ್ವದ ಕ್ಷೇತ್ರ. ಜಾತ್ರೆ, ಜನಾಂಗ, ಧರ್ಮ, ಕಲೆ, ಸಾಹಿತ್ಯ-ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ-ಹವ್ಯಾಸ, ಸಂಪ್ರದಾಯಗಳಲ್ಲದೆ, ಈ ಭಾಗದ ಬದುಕಿಗೆ ಹೊಸ ತಿರುವು ನೀಡಿ, ಹಸಿರು ಕ್ರಾಂತಿ ಹಾಡಿದ ಕೃಷ್ಣಾ ಮೇಲ್ದಂಡೆಯ ನೀರಾವರಿ ಯೋಜನೆ, ಮಳೆ-ಬೆಳೆ, ಭೌಗೋಳಿಕ ಪರಿಸರ, ಖನಿಜ ಸಂಪತ್ತು, ಉದ್ಯೋಗಗಳ ಸಮಗ್ರ ಮಾಹಿತಿಯ ಅಪೂರ್ವ ಕೃತಿ. ಇದೊಂದು ಅಧ್ಯಯನ ಯೋಗ್ಯವಾದ ಆಕರ ಗ್ರಂಥವಾಗಿದೆ.
ಪ್ರೊ. ಸೂಗಯ್ಯ ಹಿರೇಮಠ ಅವರು 09-05-1950ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಹಳ್ಳಿಯಲ್ಲಿ ಜನಿಸಿದರು. ತಂದೆ ಶರಣಯ್ಯ ಹಿರೇಮಠ, ತಾಯಿ ಶಾಂತಮ್ಮ ಹಿರೇಮಠ. ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಜಾನಪದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ವಿದ್ಯಾಲಯ ಹಾಗೂ ಗುಲಬರ್ಗಾ ಯು.ಜಿ.ಸಿ. ಅಡಿಯಲ್ಲಿ ಉತ್ತರ ಕರ್ನಾಟಕದ ಜನಪದ ಸಾಹಿತ್ಯ, ಸಂಗ್ರಹ ಮಾಡಿದ್ದಾರೆ. ಜನಪದ ವೈದ್ಯಕೋಶ ಗುಲಬರ್ಗಾ ಜಿಲ್ಲೆಯ ಸಂಗ್ರಹ ಮಾಡಿರುವ ಇವರು ವೃತ್ತಿಯಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀಮತಿ ಚನ್ನಮ್ಮ ಬಸಪ್ಪ ...
READ MORE