ಕನ್ನಡ ಸಾಹಿತ್ಯ ಈ ಶತಮಾನದ ನೋಟ ಎಂಬ ಉಪಶೀರ್ಷಿಕೆಯಡಿ ವಿಮರ್ಶಕ ಡಾ., ಡಿ.ಪಿ. ಅಶೋಕ ಅವರು ಸಂಪಾದಿಸಿದ ಕೃತಿ-ಶಿವರಾಮ ಕಾರಂತ. 1902 ಅಕ್ಟೋಬರ್ 10 ರಂದು ಜನಿಸಿದ ಶಿವರಾಮ ಕಾರಂತರು 9 ಡಿಸೆಂಬರ್ 1997 ರಂದು ಮಣಿಪಾಲ್ ನಲ್ಲಿ ನಿಧನರಾದರು. ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ. ಅವರು ಕನ್ನಡ ಸಾಹಿತ್ಯದಲ್ಲಿ ಬರಹ ಆರಂಭಿಸಿದ ಅಂದಿನಿಂದ ಮರಣದ ಕೊನೆಯ ದಿನಗಳವರೆಗೂ ಕ್ರಿಯಾಶೀಲರಾಗಿಯೇ ಇದ್ದರು ಎಂದರೆ ಅತಿಶಯೋಕ್ತಿಯಲ್ಲ. ಹೀಗಾಗಿ, ಸಾಹಿತ್ಯದ ಅವರ ಚಿಂತನೆ, ಅಭಿವ್ಯಕ್ತಿ ಇತ್ಯಾದಿ ಬರಹಗಳು, ಅವುಗಳ ಮೇಲೆ ಸಾಹಿತ್ಯಾಸಕ್ತರ ವಿಸ್ತೃತ ಅಭಿಪ್ರಾಯಭರಿತ ಲೇಖನಗಳು ಅಸಂಖ್ಯ. ಪ್ರಮುಖವಾದವುಗಳನ್ನು ಸಂಗ್ರಹಿಸಿ ಲೇಖಕ ಟಿ.ಪಿ. ಅಶೋಕ ಅವರು ಸಂಪಾದಿತ ಕೃತಿಯೇ ಇದು. ಕಾರಂತರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತದೆ ಮಾತ್ರವಲ್ಲ; ಕನ್ನಡ ಸಾಹಿತ್ಯ ವಿಮರ್ಶೆ ವಲಯದಲ್ಲಿ ಉತ್ತಮ ಬರಹಗಳಾಗಿಯೂ ಇಲ್ಲಿ ಸಂಪಾದಿತಗೊಂಡಿವೆ.
©2024 Book Brahma Private Limited.