ರಂಗ ಕಲಾವಿದರೂ ಆಗಿರುವ ಬಿ.ಎಸ್. ಕೇಶವರಾವ್ ರಂಗಭೂಮಿಯ ಬಗ್ಗೆ ಅಪಾರ ಅನುಭವವುಳ್ಳವರು. ಟಿ.ಪಿ. ಕೈಲಾಸಂ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಒಬ್ಬರು. ಅವರು ಕೈಲಾಸಂ ಕೃತಿಗಳ ಬಗ್ಗೆ ಬರೆದಿರುವುದೂ ಅಷ್ಟೇ ಮಹತ್ವಪೂರ್ಣ. ಇಲ್ಲಿ ಅವರು ಕೈಲಾಸಂ ನಾಟಕಗಳಲ್ಲಿ ಬರುವ ಹಾಡುಗಳನ್ನೂ ಜೋಕುಗಳನ್ನೂ ಒಟ್ಟಿಗೆ ಕಲೆಹಾಕಿದ್ದಾರೆ. ಕೈಲಾಸಂ ಅವರದೇ ಶೈಲಿಯ ವಿಶಿಷ್ಟ ಹಾಡುಗಳು ಮತ್ತು ಅವರು ಸೃಷ್ಟಿಸುವ ತಮಾಷೆಗಳನ್ನು ಆಸ್ವಾದಿಸುವುದೇ ಒಂದು ಅನನ್ಯ ಅನುಭವ, ಅದಕ್ಕೆ ಈ ಕೃತಿ ಅವಕಾಶ ಮಾಡಿಕೊಡುತ್ತದೆ.
ಮೂಲತಃ ಮೈಸೂರಿನವರಾದ (ಜನನ: 15-12-1935) ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು. ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ...
READ MORE