ಡಿ.ಎಸ್.ನಾಗಭೂಷಣ ಅವರು ಕರ್ನಾಟಕದ ಸಮಾಜವಾದಿಗಳ ಪರಿಚಯವನ್ನು ಸಂಪಾದಿಸಿ ಪ್ರಕಟಿಸಿರುವ ಕೃತಿ ನಮ್ಮ ಸಮಾಜವಾದಿಗಳು. ಕೃತಿಯಲ್ಲಿ ಲೇಖಕರೇ ಬರೆದಿರುವಂತೆ, ನಿಜ, ಈ ಸಮಾಜವಾದಿಗಳಲ್ಲಿ ಹಲವರು ಮುಖ್ಯವಾಗಿ ಎರಡನೇ ತಲೆಮಾರಿನವರು ರಾಜಕೀಯ ಭ್ರಷ್ಟತೆಯ ಸುಳಿಗೆ ಸಿಕ್ಕರು. ಅದಕ್ಕೆ ಮತ್ತೆ ಅವರ ವೈಯಕ್ತಿಕ ದೌರ್ಬಲ್ಯಗಳಷ್ಟೇ ಸಮಾಜವಾದವನ್ನು ತಾತ್ವಿಕ ಸ್ಕೂಲತೆಯಿಂದ ಕಾಪಾಡಲಾಗದ ಆದರ ಮೊದಲ ತಲೆಮಾರಿನವರ- ಮೇಲೆ ತಿಳಿಸಿದ ಕಾಂಗ್ರೆಸ್ ಯಜಮಾನಿಕೆಯ ರಾಜಕೀಯ ಪ್ರಧಾನ ಧಾರೆಯ ದಟ್ಟ ಪ್ರಭಾವದಿಂದಾಗಿಯೋ ಏನೋ- ರಾಜಕೀಯ ಅಸಹಾಯಕತೆಯ ಕಾರಣವಾಗಿರಬಹುದು. ಇದ ರಿಂದಾಗಿ ಸಮಾಜವಾದ ಮತ್ತು ಸಮಾಜವಾದಿ ಎಂಬ ಎರಡು ಶಬ್ದಗಳೂ ಜನತೆಯ ಮನಸ್ಸಿನಲ್ಲಿ ಅನುಮಾನಾಸ್ಪದ ಶಬ್ದಗಳಾದವು. ಆದರೆ ಈ ಅನುಮಾನಾಸ್ಪದೆತೆಗೆ ಈ ಎರಡೂ ಶಬ್ದಗಳಲ್ಲಿ ಕಾರಣವಿಲ್ಲ ಎಂಬುದನ್ನು ಶೃತಪಡಿಸುವ ಒಂದು ಪ್ರಯತ್ನವಾಗಿ ಈ ಸಂಕಲನವನ್ನು ಸಂಪಾದಿಸಿ ನೀಡುವ ಪ್ರಯತ್ನ ಮಾಡಲಾಗಿದೆ. ಸಮಾಜವಾದ ಮತ್ತು ಸಮಾಜವಾದಿ ಎಂಬ ಶಬ್ದಗಳ ನಿಜವಾದ ಘನತೆ ಮತ್ತು ಗೌರವವಗಳನ್ನು ಎತ್ತಿಹಿಡಿಯುವ, ಅಗತ್ಯವಿದೆಡೆ ಅವನ್ನು ವಿಮರ್ಶೆಗೆ ಈಡು ಮಾಡುವಂತಹ ಬರಹಗಳು ಇಲ್ಲಿವೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.