‘ಹಮ್ಮಿಗೆ ಬ್ರಹ್ಮ ತಾ ಕೆಟ್ಟ’ ಗುರು-ಶಿಷ್ಯರ ತತ್ವ ಪದಗಳು, ಈ ಕೃತಿಯನ್ನು ಲೇಖಕ ಡಾ. ಸಿ.ಬಿ. ಚಿಲ್ಕರಾಗಿ ಸಂಪಾದಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಬದುಕಿನ ಪರಂಪರೆಯಲ್ಲಿ ತತ್ವಪದ ಪರಂಪರೆ ತುಂಬಾ ಮೌಲ್ಯಯುತ ಪರಂಪರೆಯಾಗಿ ಬೆಳೆದು ಬಂದಿದೆ. ಅದರಲ್ಲೂ ರಾಯಚೂರು ಜಿಲ್ಲೆಯ ತತ್ವಪದಕಾರರ ಬದುಕು ಮತ್ತು ಅವರ ಅಲೆಮಾರಿ ಸಾಂಸ್ಕೃತಿಕ ಜೀವನ ಶೈಲಿ ಮನೆ -ಮನಕ್ಕೆ ತಲುಪಿದ್ದು ವಿಶೇಷವಾದ ಜೀವಪರ ಕಾಳಜಿಯಾಗಿದೆ.
ಗುರು ಶಿಷ್ಯ ಸಾಹಿತ್ಯ ಪರಂಪರೆಯನ್ನು ಸಾರುತ್ತಾ ಬಂದಿರುವ ತತ್ವಪದ ಮತ್ತು ಭಾವೈಕ್ಯ ಸಂಬಂಧ ಹಿಂದೂ-ಮುಸ್ಲಿಂ ಧರ್ಮದ ಸೌಹಾರ್ದತೆಯ ಕೊಂಡಿಯಾಗಿ ಸಾಗುತ್ತಿದೆ. ಇಲ್ಲಿ ಶರಣರು, ದಾಸರು, ಸಂತರು, ಸೂಫಿಗಳು ಒಂದೇ ಅಂಗಳದಲ್ಲಿ ಮನುಷ್ಯ ಪ್ರೀತಿಯ ಮಾರ್ಗವನ್ನು ತೋರಿಸಿ ಹೋಗಿದ್ದಾರೆ. ಪ್ರಮುಖವಾಗಿ ತತ್ವಪದಕಾರರು ಬದುಕನ್ನು ಬಯಲೊಳಗೆ ಬೆತ್ತಲುಗೊಳಿಸಿ ನಾಳೆ ಎನ್ನುವುದು ನಾಳೆಯಾಗಿಯೇ ಉಳಿಯುತ್ತದೆ. ಎನ್ನುವ ಸತ್ಯದ ರೂಪಕವನ್ನು ಜನಸಾಮಾನ್ಯರ ಕಣ್ಣ ಮುಂದೆ ಬಯಲುಗೊಳಿಸಿದ ಅವರ ಸರಳ ಮಾತಿನ, ಹಾಡಿನ ಮೋಡಿಯಿಂದ ಸಾರಿದ್ದಾರೆ. ಅಂತಹ ತತ್ವಪದಕಾರರ ಸಾಲಿನಲ್ಲಿ ಮಸ್ಕಿ ಭಾಗದ ಗುರು ಶಿಷ್ಯರಾದ ಬಿ. ದೇವೆಂದ್ರಪ್ಪ, ಶಿವಣ್ಣ ಹುಲ್ಲೂರು ಮತ್ತು ಗುರು ಬಸವಶಾಸ್ತ್ರಿ. ಇವರ ತತ್ವಪದಗಳನ್ನು ಡಾ. ಸಿ.ಬಿ. ಚಿಲ್ಕರಾಗಿ ಅವರು ಸಂಪಾದಿಸಿದ್ದಾರೆ.
ಡಾ. ಸಿ.ಬಿ. ಚಿಲ್ಕರಾಗಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದವರು. ಚಿಲ್ಕರಾಗಿ, ಗುಡಿಹಾಳ, ಮಸ್ಕಿ ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು, ಪದವಿ ಶಿಕ್ಷಣ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಸದ್ಯಕ್ಕೆ, ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು:ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎನ್ನುವ ಕೃತಿಗಳನ್ನುರಚಿಸಿದ್ದಾರೆ. ...
READ MORE