ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರ ’ಕನ್ನಡ ಕವಿಗಳು ಕಂಡ ಭಾರತ’ ಕೃತಿಯು ಕವನಗಳ ಸಂಪಾದನೆಯಾಗಿದೆ. ಈ ಕೃತಿಯು ಕಳೆದ ಶತಮಾನಗಳಲ್ಲಿ ಕನ್ನಡ ಕವಿಗಳು ಆಧುನಿಕತೆಯ ಪ್ರಭಾವ ಕಾರಣವಾಗಿ ರಾಷ್ಟ್ರೀಯತೆಯ ಮೇಲೈಯಲ್ಲಿ ಕಂಡುಕೊಂಡ 'ಭಾರತ'ವನ್ನು ಒಂದು ಕೇಂದ್ರ ಘಟಕವಾಗಿಸಿಕೊಂಡು ರಚಿಸಿದ ಕವಿತೆಗಳ ಸಂಪುಟವಾಗಿದೆ.
ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಎರಡೂ ಕಾಲದ 'ಭಾರತ'ವನ್ನು ಮತ್ತು ಕವಿದೃಷ್ಟಿಯಲ್ಲಾದ ಪ್ರೇರಣೆ-ಪ್ರಭಾವ-ಧೋರಣೆಗಳನ್ನು ಅರಿಯಲು ಈ ಕೃತಿಯಲ್ಲಿ ಸಾಧ್ಯವಾಗುತ್ತದೆ. ಕಾವ್ಯ ವಸ್ತುವಿನ ವಿವಿಧ ಆಯಾಮಗಳು ಕವಿಸೃಷ್ಟಿಯ ವಿವಿಧ ದೃಷ್ಟಿಗಳನ್ನು ಇಲ್ಲಿ ಅರಿಯಬಹುದು. ಎರಡೂ ಕಾಲಘಟ್ಟದಲ್ಲಿ 'ಭಾರತ' ಕಾವ್ಯದ ಕೇಂದ್ರ ವಸ್ತುವಿನಲ್ಲಿ ಹಲವು ವಿಚಾರಧಾರೆಗಳು ಕವಿಯನ್ನು ನಿಯಂತ್ರಿಸಿವೆ. ತಾನು ಭಾವಿಸಿದ ಭಾರತ ಮತ್ತು ಲಭ್ಯವಾದ ಭಾರತಗಳನ್ನು ಮುಖಾಮುಖಿಯಾಗಿಸಲು ಇಲ್ಲಿ ಅವಕಾಶವಿದೆ. ಕವಿಯ ಸೃಷ್ಟಿ-ದೃಷ್ಟಿ-ಆಭಿವ್ಯಕ್ತಿ ವಿಧಾನಗಳ ಧೋರಣೆಗಳಲ್ಲಿಯೂ ವಿವಿಧ ಆಯಾಮಗಳಿರಬಹುದು. ಆದರೆ 'ಭಾರತ' ಒಂದು ದೇಶವಾಗಿ, ಸಂಸ್ಕೃತಿಯಾಗಿ, ಸಮಷ್ಟಿ ಪ್ರಶ್ನೆಯಾಗಿ, ಜೀವನಧರ್ಮವಾಗಿ, ಧರ್ಮಸಮನ್ನಯ ನೆಲೆಯಾಗಿ, ಸಾಮರಸ್ಯ-ಸಹಿಷ್ಣುತೆಯ ಮೂಲವಾಗಿ, ಸಂಕೀರ್ಣ ಅಭಿಜ್ಞಾ ಕೇಂದ್ರವಾಗಿ, ನಾನಾ ನೆಲೆಯ ಗ್ರಹಿಕೆಗಳಲ್ಲಿ ಕಂಡು ಚಿಂತನಾರ್ಹವೆನಿಸಿದ್ದು, ಕಳೆದ ಶತಮಾನಗಳಿಂದಲೇ ಎಂಬುದು ಇಲ್ಲಿ ಚಾರಿತ್ರಿಕ ಮಹತ್ವದ ವಿಚಾರವಾಗಿದೆ.
©2024 Book Brahma Private Limited.