ಬಿಜಾಪುರ-ವಿಜಯನಗರ ಕಾಲದಿಂದ ಹಿಡಿದು ತರುವಾಯದ ಕೆಲಕಾಲದವರೆಗಿನ ಹಂಡೆ ಪಾಳೆಯಗಾರರ (ಸಂಸ್ಥಾನಿಕರ) ಚರಿತ್ರೆಯನ್ನು ಈ ಕೈಪಿಯತ್ತುಗಳಲ್ಲಿ ನಿರೂಪಿಸಲಾಗಿದೆ.ಈ ಹಂಡೆ ಸಂಸ್ಥಾನದ ಪಾಳೆಯಗಾರರಿಗೆ " ಹಂಡೆ ವಜೀರ " ಎಂಬ ಬಿರುದು ಬಿಜಾಪುರ ಸುಲ್ತಾನರಿಂದ ಕೊಡಲ್ಪಟ್ಟಿತ್ತು. ಆ ಬಿರುದಿನ ಕಾರಣದಿಂದ ಮತ್ತು ಹಿಂದೆ ಈ ಮನೆತನದ ಚರಿತ್ರೆಯ ಆಕಾರಗಳು ಕಡಿಮೆ ಲಭ್ಯವಿದ್ದುದರಿಂದ ಅವರ ಜಾತಿಯ ಮೂಲ ಕೆಲವು ಅಸಂಗತ ಗ್ರಹಿಕೆಗಳಿಗೆ ಕಾರಣವಾಗಿತ್ತು.ಕೆಲವು ಬರಹಗಳಲ್ಲೂ ಅದು ಕಾ ಅಆಣಿಸಿಕೊಂಡಿತ್ತು. ಏಕೆಂದರೆ "ಹಂಡೆ" ಎಂಬ ಶಬ್ದ ಬಂದ ಕೂಡಲೇ ಅದು ಒಂದು ನಿರ್ದಿಷ್ಟ ಕೋಮಿಗೆ ಸೇರಿದ್ದೆಂದು ಹಿಂದೆ ತಿಳಿಯಲಾಗುತ್ತಿತ್ತು. ಆದರೆ ಈಚೆಗೆ ಶೋಧನೆ ಹೆಚ್ಚು ಪ್ರಮಾಣದಲ್ಲಿ ನಡೆದು, ಅಂಥ ತಿಳಿವಳಿಕೆ ಅಸಂಗತವೆಂಬ ಅಂಶ ಈಗ ಮನದಟ್ಟಾಗಿದೆ. ಹಂಡೆ ಎಂಬ ವಿಶೇಷಣ, ಹಂಡೆ ಜೋಯಿಸರು,,ಹಂಡೆ ಜೋಗಿಗಳು, ಹಂಡೆ ರಾವುತರು,ಹಂಡೆ ಕುರುಬರು, ಹಂಡೆ ಮುಸ್ಲಿಮರು,ಹಂಡೆ ಕೊರವರು- ಇಷ್ಟು ಜಾತಿ-ಜನಾಂಗಗಳವರಿಗೆ ಇದ್ದ ಸಂಗತಿ ಈಚೆಗೆ ತಿಳಿದುಬಂದಿದ್ದು ಅದು ಒಂದೇ ಕೋಮಿಗೆ ಇರುವಂಥದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಈ ಪಾಳೆಯಗಾರರು(ಸಂಸ್ಥಾನಿಕರು) ಬಿಜಾಪುರ-ವಿಜಯನಗರ ಕಾಲಕ್ಕಿಂತ ಹಿಂದಿನಿಂದ ಲಿಂಗಾಯತ ಅಥವಾ ವೀರಶೈವ ಧರ್ಮದವರಿದ್ದರೆಂದು ಈಗಾಗಲೇ 20 ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೋಧನೆ ಮಾಡಿದಾಗ ಈ ಮೇಲಿನ ಮಾತನ್ನು ಹೇಳುವುದು ಅಗತ್ಯವಿದೆ ಎನಿಸಿತು ಎಂದು ಚಿತ್ರದುರ್ಗದ ಖ್ಯಾತತ ಸಂಶೋಧಕರು ಡಾ.ಬಿ.ರಾಜಶೇಖರಪ್ಪ ಈ ಕೃತಿಯ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಡಾ. ಎಸ್. ಸಿ. ಪಾಟೀಲ ಅವರು ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಾನಶಿವನಗಿಯಲ್ಲಿ 1955ರಲ್ಲಿ ಜನಿಸಿದರು. ಪ್ರಾಥಮಿಕ - ಪ್ರೌಢಶಿಕ್ಷಣಗಳನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದ ಅವರು ಆನಂತರ ಎಂ.ಎ. ಎಂ.ಎಡ್.ಗಳಲ್ಲದೆ ಚಿತ್ರಕಲೆ ಹಾಗೂ ಶಾಸನಶಾಸ್ತ್ರಗಳಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಜನಪದ ಚಿತ್ರಕಲೆ ಹಾಗೂ ಕಲಾಶಿಕ್ಷಣ ಕುರಿತು ಪ್ರತ್ಯೇಕವಾದ ಎರಡು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಚಿತ್ರಕಲಾವಿದರಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದು ಆರು ಪುಸ್ತಕಗಳನ್ನು ರಚಿಸಿಕೊಟ್ಟಿರುವುದಲ್ಲದೆ, ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕಲೆ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಕೆಲವು ಪ್ರಶಸ್ತಿ ಪಡೆದಿರುವ ಶ್ರೀಯುತರು ಕೆಲವರ್ಷ ...
READ MORE