ಬಸವ ಯುಗದ ವಚನಕಾರರು

Author : ಸಿ.ಪಿ. ನಾಗರಾಜ

Pages 192

₹ 200.00




Year of Publication: 2022
Published by: ನಾಗು ಸ್ಮಾರಕ ಪ್ರಕಾಶನ
Address: #75, 5ನೇ ಕ್ರಾಸ್‌, ಕ್ರಿಶ್ಣ ಗಾರ್ಡನ್‌, ಆರ್.ವಿ. ಕಾಲೇಜ್‌ ಪೋಸ್ಟ್, ಬೆಂಗಳೂರು- 560059
Phone: 9986347521

Synopsys

ಸಿ.ಪಿ.ನಾಗರಾಜ ಅವರು ಸಂಪಾದಿಸಿರುವ ವಚನಗಳ ಸಂಕಲನ ಕೃತಿ  ʻಬಸವಯುಗದ ವಚನಕಾರರು- ಆಯ್ದ ವಚನಗಳ ಕಟ್ಟುʼ. ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಪ್ರಮುಖರಾದ ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರನ್ನುಹೊರತು ಪಡಿಸಿ ಉಳಿದ ಬಸವಯುಗದ ವಚನಕಾರರ ವಚನಗಳು ಇಲ್ಲಿ ಸೇರ್ಪಡೆಯಾಗಿವೆ. ಈ ಕಾಲದ ಅರವತ್ತ ನಾಲ್ಕು ಶರಣರು ಮತ್ತು ಹದಿನೆಂಟು ಶರಣೆಯರ ಒಟ್ಟು ಮುನ್ನೂರ ಒಂದು ವಚನಗಳು ಇಲ್ಲಿವೆ.

 ಅವರಲ್ಲಿ; ಅಂಬಿಗರ ಚೌಡಯ್ಯ, ಅಕ್ಕಮ್ಮ, ಅಜಗಣ್ಣತಂದೆ, ಆದಯ್ಯ, ಉರಿಲಿಂಗದೇವ, ಅವಸರದ ರೇಕಣ್ಣ, ಗಣೇಶ ಮಸಣಯ್ಯ, ಚಂದಿಮರಸ, ಚೆನ್ನಬಸವಣ್ಣ, ಜೋದರ ಮಾರಣ್ಣ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ನಾಗಲಾಂಬಿಕೆ, ಅಮುಗೆ ರಾಯಮ್ಮ, ಅಕ್ಕಮ್ಮ ಕೆಲವರು. ಇವರೆಲ್ಲರೂ ಮೂತಃ ನಿಷ್ಠೂರ ವಿಮರ್ಶಕರು. ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಮುತ್ತಣ ಸಾಮಾಜಿಕ ಪರಿಸರವನ್ನು ಕುರಿತು , ಎಲ್ಲಕ್ಕೂ ಮಿಗಿಲಾಗಿ ತಮ್ಮನ್ನೇ ಕುರಿತು ವಸ್ತುನಿಷ್ಠವಾಗಿ ವಿಮರ್ಶೆ ಮಾಡಿದವರು. ಹೀಗೆ ವಚನಕಾರರು ಬಳಸಿರುವ ಕನ್ನಡ ನುಡಿರಚನೆಗಳು ಜನಮನವನ್ನು ತನ್ನತ್ತ ಸೆಳೆಯುವಂತಹ ಶೈಲಿಯಿಂದ ಕೂಡಿದೆ. 

 ಇಲ್ಲಿ ಹೇಳಲಾಗಿರುವ ಶಿವಶರಣೆಯರಲ್ಲಿ ಬಹುತೇಕ ಮಂದಿ ತಾವು ರಚಿಸಿದ ವಚನಗಳಲ್ಲಿ ಶಿವನ ಹೆಸರನ್ನು ತಮ್ಮ ಅಂಕಿತನಾಮವನ್ನಾಗಿ ಬಳಸಿದ್ದನ್ನು ಗಮನಿಸಬಹುದು. ವಚನಕಾರರು ಹುಟ್ಟಿ ಬೆಳೆದ ಇಲ್ಲವೇ ಬೇರೊಂದು ಊರಿಗೆ ಹೋಗಿ ನೆಲೆಸಿದ ತಾಣದಲ್ಲಿ ಶಿವನಿಗೆ ಇದ್ದಂತಹ ಹೆಸರುಗಳನ್ನು ಇಟ್ಟುಕೊಂಡಿದ್ಧಾರೆ.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Excerpt / E-Books

ವಿಮರ್ಶಕ ಕೆ. ಮರುಳಸಿದ್ದಪ್ಪ ʻಬಸವ ಯುಗದ ವಚನಕಾರರು- ಆಯ್ದ ವಚನಗಳ ಕಟ್ಟುʼ ಪುಸ್ತಕದಲ್ಲಿ ಮುನ್ನುಡಿಯ ಮಾತುಗಳನ್ನಾಡಿದ್ದಾರೆ. ಅವರು ಹೇಳುವಂತೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ವಚನಯುಗ ಒಂದು ಸ್ಥಿತ್ಯಂತರದ ಕಾಲ. ಚಂಪೂ ಯುಗದ ಪ್ರೌಢ ಕಾವ್ಯ ಪರಂಪರೆಯಿಂದ ಕನ್ನಡ ಕಾವ್ಯ ಜನಪ್ರಿಯ ನೆಲೆಗೆ ಬಂದು ಮುಟ್ಟಿದ್ದು ಹನ್ನೆರಡನೆಯ ಶತಮಾನದ ವಚನಕಾರರಿಂದ. ಅಲ್ಲಿಂದ ಮುಂದೆ ಕನ್ನಡ ಸಾಹಿತ್ಯದ ದಿಕ್ಕೇ ಬದಲಾಯಿತು. ದೇಸಿ ಯುಗ ಆರಂಭವಾಯಿತು. ವಚನಕಾರರೇ ಇದಕ್ಕೆ ಸ್ಫೂರ್ತಿ ನೀಡಿದರು. ಯಾವುದೇ ಚಳುವಳಿಯ ನೇತಾರರು ಕೆಲವೇ ಕೆಲವು ಮಂದಿ ಇರಬಹುದಾದರೂ, ಅದರ ಒಡಲಿನಲ್ಲಿ ಸಾವಿರಾರು ಮಂದಿಯಿರುತ್ತಾರೆ. ಶಿವಶರಣರಲ್ಲಿಯೂ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣನವರಲ್ಲದೆ ನೂರಾರು ಶರಣಶರಣೆಯರ ವಚನಗಳು ಕಾಲದ ಪ್ರವಾಹದಲ್ಲಿ ಈಜಿ ಉಳಿದಿವೆ. ಇವರೆಲ್ಲರೂ ಅನುಭಾವದ ನೆಲೆಯಲ್ಲಿ ಸಮಾನರೇ ಎಂದು ಭಾವಿಸಬೇಕಾಗುತ್ತದೆ. ಮಡಿವಾಳ ಮಾಚಯ್ಯನ ಕೃಪೆಯಿಂದ ತಾವು ಬಸವಣ್ಣನನ್ನು ಕಂಡೆನೆಂದು ಪ್ರಭುದೇವರು ಸ್ಮರಿಸಿಕೊಳ್ಳುತ್ತಾರೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಮುಂತಾದ ಅಸ್ಪೃಶ್ಯ ನೆಲೆಯಿಂದ ಬಂದವರನ್ನು 'ಹಿರಿಯ ಮಾಹೇಶ್ವರರು... ಆದ್ಯರು' ಎಂದು ಉಳಿದವರು ಗೌರವಿಸುತ್ತಾರೆ. ಶಿವಶರಣೆಯರ ಬಗೆಗಂತೂ ಅತೀವ ಗೌರವವಿದೆ. ಹೀಗಿದ್ದರೂ ಜನಪ್ರಿಯ ನೆಲೆಯಲ್ಲಿ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿಯ ವಚನಗಳಿಗೆ ಹೆಚ್ಚು ಪ್ರಚಾರ ಸಿಕ್ಕಿದೆ. 

 ಈ ದೃಷ್ಟಿಯಿಂದ ಡಾ. ಸಿ.ಪಿ.ನಾಗರಾಜ ಅವರು ಸಂಪಾದಿಸಿರುವ “ಬಸವಯುಗದ ವಚನಕಾರರು-ಆಯ್ದ ವಚನಗಳ ಕಟ್ಟು” ಗಮನಾರ್ಹವೆನಿಸುತ್ತದೆ. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ-ಈ ಮೂವರನ್ನು ಹೊರತುಪಡಿಸಿ, ಉಳಿದ ಬಸವಯುಗದ ವಚನಕಾರರ ವಚನಗಳು ಇಲ್ಲಿ ಸೇರ್ಪಡೆಯಾಗಿವೆ. ಈ ಕಾಲದ ಅರವತ್ತ ನಾಲ್ಕು ಶರಣರು ಮತ್ತು ಹದಿನೆಂಟು ಶರಣೆಯರ ಒಟ್ಟು ಮುನ್ನೂರ ಒಂದು ವಚನಗಳು ಇಲ್ಲಿವೆ. ಅನುಭಾವ ಮತ್ತು ಸಾಹಿತ್ಯ - ಈ ಎರಡು ನೆಲೆಯಿಂದ ಇಲ್ಲಿ ಸೇರ್ಪಡೆಯಾಗಿರುವ ವಚನಗಳಿಗೆ ಮಹತ್ವವಿದೆ. ಈ ಸಂಕಲನದ ಹಿನ್ನೆಲೆ ಮತ್ತು ವೈಶಿಷ್ಟ್ಯವನ್ನು ನಾಗರಾಜ್ ವಿವೇಚಿಸಿದ್ದಾರೆ. 

ಕೆ. ಮರುಳಸಿದ್ದಪ್ಪ ಅವರ ಪರಿಚಯ

Related Books