ಲೇಖಕ ಬಿ.ಆರ್, ಸುಹಾಸ್ ಅವರ ಕೃತಿ -‘ಭಾರತದ ವೈವಿಧ್ಯಮಯ ಜಾನಪದ ಕಥೆಗಳು’. ‘ಆಯಾ ರಾಜ್ಯಗಳ, ಪ್ರದೇಶಗಳ ವಿಶಿಷ್ಟ ಪದ್ಧತಿಗಳು, ಆಚರಣೆಗಳು, ನಂಬಿಕೆಗಳು ಇತ್ಯಾದಿ ಮೈತುಂಬಿಕೊಂಡು ಆಯಾ ರಾಜ್ಯಗಳ, ಪ್ರದೇಶಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತವೆ. ಭಾರತೀಯ ಸಂಸ್ಕೃತಿಯು ಮೂಲತಃ ಒಂದೇ ಆಗಿದ್ದರೂ ಬೇರೆ ಬೇರೆ ರಾಜ್ಯ ಪ್ರದೇಶಗಳಲ್ಲಿ ಸಣ್ಣ-ಪುಟ್ಟ ಪ್ರಾದೇಶಿಕ ವ್ಯತ್ಯಾಸಗಳಿದ್ದು ಅವು ಸ್ವಾರಸ್ಯವಾಗಿ ಈ ಜಾನಪದ ಕಥೆಗಳಲ್ಲಿ ಕಾಣುತ್ತವೆ. ಅಂತೆಯೇ ಅನೇಕ ಕಥೆಗಳು ಬೇರೆ ಬೇರೆ ಪ್ರದೇಶಗಳಲ್ಲಿ ಸಣ್ಣ ವ್ಯತ್ಯಾಸಗಳೊಂದಿಗೆ ಹಾಗೆಯೇ ಕಂಡು ಬರುತ್ತವೆ. ಇದಕ್ಕೆ ಕಾರಣ, ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಾ ಕಥೆಗಳನ್ನು ಹರಡಿರುವುದು. ಹಾಗೆ ಪ್ರತಿ ಬಾರಿ ಕಥೆಗಳನ್ನು ಹೇಳುತ್ತಾ ಹರಡಿದಾಗ ಅವುಗಳ ಸ್ವಾರಸ್ಯ ಹೆಚ್ಚುತ್ತದೆ. ಜಾನಪದ ಕಥೆಗಳನ್ನು ಯಾರೋ ಒಬ್ಬರು ಬರೆದಿರದೇ, ಒಬ್ಬರಿಗೊಬ್ಬರು ಬಾಯಿ ಮಾತಿನ ಮೂಲಕ ಹೇಳುತ್ತಾ, ಹರಡುತ್ತಾ ಅವು ಸಂಗ್ರಹಗಳಾಗುತ್ತವೆ. ಭಾರತದ ವಿವಿಧ ರಾಜ್ಯಗಳ, ಪ್ರದೇಶಗಳ, ಜನಾಂಗಗಳ ಇಂಥ ಒಂದಷ್ಟು ಕಥೆಗಳನ್ನು ವಿವಿಧ ಸಂಗ್ರಹಗಳಿಂದ ಆರಿಸಿ ಇಲ್ಲಿ ಪುನರ್ನಿರೂಪಿಸಿದ್ದೇನೆ.’ ಎಂದು ಸಂಪಾದಕರು ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.