ಕವಿ ಹಾಗೂ ಲೇಖಕರಾದ ಎ ಎಸ್ ಮಕಾನದಾರ ಹಾಗೂ ಹಾಶಮ ಎಂ ಗುತ್ತಲ ಅವರು ಜೊತೆಗೂಡಿ ಪ್ರಕಟಿಸಿದ ಕವನ ಸಂಕಲನ-ಸೌಹಾರ್ದ ಸಂಗಮ. ಸೂಫಿ ಸಂತ ದೂದ್ ಪೀರಾ ಅವರ ಚರಿತ್ರೆ ಯ ಜೊತೆ ಜೊತೆಗೆ ಅವರ ಅನುಕರಣೇಯವಾದ ಬದುಕಿನ ಕುರಿತಾಗಿ ನಾಡಿನ ಹಿರಿ- ಕಿರಿಯ ಕವಿಗಳ ಕವಿತೆ ಗಳನ್ನೊಳಗೊಂಡಿವೆ. ಸೌಹಾರ್ದ ಸೂಫೀ ಸಂತರ ಬದುಕು ಪ್ರಾದೇಶಿಕ ಸಾಂಸ್ಕೃತಿ ಕ ಬದುಕನ್ನು ದಾಖಲೆ ಮಾಡುವ ಕಾರ್ಯ ಎಲ್ಲ ಸೂಫಿ ಸಂತರ ಕುರಿತಾಗಿ ನಡೆದರೆ ಅದು ಮುಂದೆ ಬರುವ ಸಂಶೋಧಕರಿಗೆ ವಸ್ತು ವಿಷಯ ಒದಗಿಸಿದಂತೆ ಆಗುತ್ತದೆ. ಚಾರಿತ್ರಿಕ ದಾಖಲೆಯಾಗಿ ಉಳಿಯುತ್ತದೆ. ಸತ್ವ ಭರಿತ ನೀತಿಯ ನುಡಿಗಳಿಂದ ಈ ಸಂಕಲನಕ್ಕೆ ಹೊಸ ಬಗೆಯ ತನ್ನತನ ತಂದುಕೊಟ್ಟಿದೆ ಡಾ ಕೆ ಷರೀಫಾ ಅವರ ಮುನ್ನಡಿ , ಕಲಾವಿದ ಪುಂಡಲೀಕ ಕಲ್ಲಿಗನೂರ ಅವರ ಬೆನ್ನುಡಿ, ಸೂಫಿ ಸಂತ ದೂದ್ ಪೀರಾ ಅವರ ಅವರ ಕುರಿತಾಗಿ ಎ ಎಸ್. ಮಕಾನದಾರ ಅವರ ದೀರ್ಘ ಪ್ರಸ್ತಾವನೆಯಿಂದ ಸಂಕಲನದ ಮೌಲ್ಯ ಹೆಚ್ಚಿದೆ
ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ. ಪ್ರಶಸ್ತಿ-ಗೌರವಗಳು: ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...
READ MORE