ರನ್ನ ಕವಿಯ (ಕ್ರಿ.ಶ. 993) 'ಸಾಹಸಭೀಮವಿಜಯಮ್' ('ಗದಾಯುದ್ಧಮ್') ಎಂಬ ಜನಪ್ರಿಯ, ವಿದ್ವಜ್ಜನಪ್ರಿಯ ಚಂಪೂಕಾವ್ಯದ (ಸು.1000) ಹೊಸ ಪರಿಷ್ಕರಣವಿದು. ಹಸ್ತಪ್ರತಿಗಳ ಲಭ್ಯತೆಯ ಕೊರತೆ, ಪಾಠನಿರ್ಣಯದ ಹಲವು ಬಗೆಯ ಕ್ಲೇಶಗಳು ಇವುಗಳ ನಡುವೆಯೇ ಈ ಪರಿಚಿತಪಠ್ಯವನ್ನು ವ್ಯಾಕರಣ-ಛಂದಸ್ಸು, ಅರ್ಥ-ಆಶಯ ಇವುಗಳ ದೃಷ್ಟಿಯಿಂದ ಇನ್ನಷ್ಟು ಉತ್ತಮಪಡಿಸುವ ಒಂದು ಸಂಪಾದಕೀಯ ಪ್ರಯತ್ನ ಇಲ್ಲಿಯದು. ಈ ಪ್ರಯತ್ನದಿಂದ ಕಾವ್ಯದ ವಾಚನ-ವ್ಯಾಖ್ಯಾನಗಳಿಗೆ, ಅಧ್ಯಯನ ಸಂಶೋಧನೆಗಳಿಗೆ ಹೆಚ್ಚು ಅನುಕೂಲವಾಗುವುದೆಂದು ಸಂಪಾದಕರ, ಪ್ರಕಾಶಕರ ನಿರೀಕ್ಷೆಯಾಗಿದೆ.
ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...
READ MORE