ಡಾ. ಎಚ್.ಎಸ್.ಎಂ. ಪ್ರಕಾಶ ಹಾಗೂ ಡಾ. ಎಂ. ವೆಂಕಟಸ್ವಾಮಿ ಅವರು ಜಂಟಿಯಾಗಿ ಸಂಪಾದಿತ ಕೃತಿ-ಈಶಾನ್ಯ ಭಾರತದ ಆಧುನಿಕ ಮತ್ತು ಐತಿಹಾಸಿಕ ಕತೆಗಳು.ಈ ಇಬ್ಬರು ಲೇಖಕರು ಭೂವಿಜ್ಞಾನಿಗಳು. ಭಾರತದ ಸರ್ವೇಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿದ್ದು ನಿವೃತ್ತರಾದವರು. ಭಾರತದ ಈಶಾನ್ಯ ಗಡಿಗಳಲ್ಲಿ ಭಯೋತ್ಪಾದನೆಯನ್ನೇ ತಮ್ಮ ಕಸುಬಾಗಿಸಿಕೊಂಡಿರುವ ಕೆಲವು ದೇಶಗಳ ಪೂರ್ವೇತಿಹಾಸದ ಆಧಾರದಿಂದ ಇಲ್ಲಿಯ ಕಥೆಗಳನ್ನು ಬರೆಯಲಾಗಿದೆ. ಇಂದಿಗಿಂತ ಇನ್ನೂ ಹಲವು ಪಟ್ಟು ಕ್ರೌರ್ಯವನ್ನು ಮೆರೆದ, ಜಾನಪದ ಗೀತೆಗಳ ಮೂಲಕ ಇತಿಹಾಸವನ್ನು ಕೆದಕಿ ಸಂಗ್ರಹಿಸಿದ, ಐತಿಹಾಸಿಕ ಆಧಾರಗಳನ್ನುಳ್ಳ ಈ ಕಥೆಗಳು ಮೈನವಿರೇಳಿಸುತ್ತವೆ. ಹಿಂದೆ ಇಂಗ್ಲಿಷ್ ಆಡಳಿತಕ್ಕೂ ಇಂದಿನ ಭಾರತದ ಕೇಂದ್ರ ಸರಕಾರಕ್ಕೂ ಸಾಕಷ್ಟು ನಡುಕ ಮತ್ತು ತಲೆನೋವನ್ನುಂಟು ಮಾಡಿದ್ದ ಪುಟ್ಟ ದೇಶಗಳ ಕಥೆಗಳಿವು. ಕ್ರೌರ್ಯವೇ ಇವುಗಳ ಜೀವಾಳ. ಬುಡಕಟ್ಟು ಸಂಸ್ಕೃತಿಯನ್ನೇ ನೆಚ್ಚಿಕೊಂಡು ನಾಗರಿಕ ಜೀವನ ನಿರಾಕರಿಸುವ ಇಲ್ಲಿಯ ಜನರು ಧೈರ್ಯಕ್ಕೆ ಹೆಸರಾದವರು. ಇಂಥ ಕಥೆಗಳು ನಮಗೆ ತೀರಾ ಹೊಸ ಅನುಭವವನ್ನಷ್ಟೇ ನೀಡದೆ ಅವರ ಬಗ್ಗೆ ಆಲೋಚಿಸುವಂತೆ ಮಾಡಬಲ್ಲವು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MORE