ಕರ್ನಾಟಕದ ಚಳುವಳಿ ಮತ್ತು ಚಿಂತನೆಯಲ್ಲಿ ಬಿ. ಕೃಷ್ಣಪ್ಪ ಅವರದು ದೊಡ್ಡ ಹೆಸರು. ದಲಿತ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕೃಷ್ಣಪ್ಪ ಅವರು ಅದಕ್ಕೆ ತಾತ್ವಿಕ-ಸಾಂಸ್ಕೃತಿಕ ನೆಲೆಗಟ್ಟು ಒದಗಿಸಲು ಪ್ರಯತ್ನಿಸಿದವರಲ್ಲಿ ಪ್ರಮುಖರು. ಕೃಷ್ಣಪ್ಪ ಅವರು ಕೇವಲ ಹೋರಾಟಗಾರ ಮಾತ್ರವಲ್ಲ. ಅವರೊಬ್ಬ ಪ್ರಖರ ಚಿಂತಕ. ಅವರ ಚಿಂತನೆ ಮತ್ತು ಬರಹಗಳನ್ನು ಈ ಪುಸ್ತಕದಲ್ಲಿ ಸಂಕಲಿಸಿ ನೀಡಲಾಗಿದೆ.
ಪ್ರೊ.ಬಿ. ಕೃಷ್ಣಪ್ಪ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ- ಬಸಪ್ಪ, ತಾಯಿ- ಚೌಡಮ್ಮ. ದಲಿತ ಸಮುದಾಯದಲ್ಲಿ ಜನಿಸಿದ ಬಿ.ಕೃಷ್ಣಪ್ಪ ಅವರು ಬಾಲ್ಯದಲ್ಲಿ ಅನೇಕ ಅವಮಾನ, ಅಪಮಾನಗಳನ್ನು ಅನುಭವಿಸಿದರು. ಅಲ್ಲದೇ ಆ ಎಲ್ಲಾ ಅವಮಾನ ಅಪಮಾನಗಳ ವಿರುದ್ಧ ಪ್ರತಿರೋಧ ಒಡ್ಡುತ್ತಿದ್ದರು. ಎಲ್ಲಾ ಅಪಮಾನಗಳ ನಡುವೆಯೂ ಶಿಕ್ಷಣದತ್ತ ಗಮನ ಹರಿಸುತ್ತಿದ್ದ ಅವರು ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದು ಭದ್ರಾವತಿಯ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೃಷ್ಣಪ್ಪ ಬ್ರಾಹ್ಮಣರಾದ ಇಂದಿರಾ ಅವರನ್ನು ...
READ MORE