ಕೊರೋನಾ ಜಗತ್ತಿನ ಸಕಲ ಚಟುವಟಿಕೆಯ ಮೇಲೂ ನೆರಳು ಚೆಲ್ಲಿದ ರೋಗ. ಬದುಕಿನ ಬೆಳಕೇ ಮಂಕಾದಾಗ ಏನೆಲ್ಲ ನಡೆಯಿತು? ಎನ್ನುವುದನ್ನು ಕನ್ನಡದ ಕತೆಗಾರ ಕಥೆಗಾರ್ತಿಯರಿಂದ ಬರೆಸುವ ವಿಚಾರ ಬಂದಿದ್ದು ಡಾ ಕಮಲಾ ಹೆಮ್ಮಿಗಿಯವರಿಗೆ. ಸಂಪಾದಿತ ಪುಸ್ತಕವಾಗಿ ಕೊರೋನಾ ಕಾಲದ ಘಟನೆಗಳನ್ನು ಬರೆದುಕೊಡಿ ಎಂದು ನೂರಾರು ಲೇಖಕರನ್ನು ಕೇಳಿ ಬರೆಸಿ, ತಿದ್ದಿ ತೀಡಿ ಸುಂದರವಾದ ಪುಸ್ತಕ ಹೊರ ತರುವ ಸಾಹಸ ಮಾಡಿದ್ದಾರೆ. ಕೊರೋನಾ ಜಗತ್ತಿನ ಸಕಲ ಚಟುವಟಿಕೆಯ ಮೇಲೂ ನೆರಳು ಚೆಲ್ಲಿದ ರೋಗ. ಬದುಕಿನ ಬೆಳಕೇ ಮಂಕಾದಾಗ ಏನೆಲ್ಲ ನಡೆಯಿತು? ಎನ್ನುವುದನ್ನು ಕನ್ನಡದ ಕತೆಗಾರ ಕಥೆಗಾರ್ತಿಯರಿಂದ ಬರೆಸುವ ವಿಚಾರ ಬಂದಿದ್ದು ಡಾ ಕಮಲಾ ಹೆಮ್ಮಿಗಿಯವರಿಗೆ. ಸಂಪಾದಿತ ಪುಸ್ತಕವಾಗಿ ಕೊರೋನಾ ಕಾಲದ ಘಟನೆಗಳನ್ನು ಬರೆದುಕೊಡಿ ಎಂದು ನೂರಾರು ಲೇಖಕರನ್ನು ಕೇಳಿ ಬರೆಸಿ, ತಿದ್ದಿ ತೀಡಿ ಸುಂದರವಾದ ಪುಸ್ತಕ ಹೊರ ತರುವ ಸಾಹಸ ಮಾಡಿದ್ದಾರೆ. ಸತೀಶ್ ಕುಲಕರ್ಣಿಯವರ ಮೌಲಿಕವಾದ ಮುನ್ನುಡಿ, ಶ್ರೀಧರ ಬನವಾಸಿಯವರ ಬೆನ್ನುಡಿ ಪುಸ್ತಕದ ಘನತೆಯನ್ನು ಹೆಚ್ಚಿಸಿವೆ.
ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20 ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ...
READ MORE