ದೇಶದ ಸ್ವಾತಂತ್ಯ್ರ ಚಳವಳಿ ಸಂದರ್ಭದಲ್ಲಿ ಕನ್ನಡದಲ್ಲಿ ರಾಷ್ಟ್ರೀಯ ಗೀತೆಗಳುಂಟೆ? ಎಂಬ ಪ್ರಶ್ನೆ ಕಾಡತೊಡಗಿ, ಅದಕ್ಕೆ ಪರಿಹಾರ ಎಂಬಂತೆ ಸಿಕ್ಕ ಗೀತೆಗಳನ್ನು ಅಂದು (1940) ಇಲ್ಲಿ ಸಂಗ್ರಹಿಸಲಾಗಿದೆ. ರಾಷ್ಟ್ರಾಭಿಮಾನವನ್ನು ಬೆಳೆಸುವ ಗೀತೆಗಳಿವು. ವಿವಿಧ ಲೇಖಕರು, ಕವಿಗಳು ಬರೆದಿದ್ದನ್ನು ಬುರ್ಲಿ ಬಿಂದು ಮಾಧವ ಆಚಾರ್ಯರು ಸಂಪಾದಿಸಿದ್ದಾರೆ.
ರಜಪೂತರ ಚಾರಣ ಗೀತೆಗಳು, ಮರಾಠರ ಶಾಹಿರಗಳು, ಕನ್ನಡಿಗರ ಕಂಠೀರವ ನರಸರಾಜ ವಿಜಯ, ಕುಮಾರರಾಮನ ಕಥೆಗಳು, ಲಾವಣಿಗಳು ಒಂದು ರೀತಿಯಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸುವ ಕಾವ್ಯಗಳೇ ಆಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಠ್ಯಾಗೂರು, ಸರೋಜಿನಿ, ಬಂಕಿಮಚಂದ್ರ ಹಾಗೂ ಕನ್ನಡದಲ್ಲಿ ಶಾಂತಕವಿ, ದ.,ರಾ. ಬೇಂದ್ರೆ, ವಿ.ಸೀ. ಕೆ.ಪಿ.ಪುಟ್ಟಪ್ಪ, ಸಾಲಿ, ಗೋವಿಂದ ಪೈ ಮೊದಲಾದವರು ಇದ್ದಾರೆ. ರಾಷ್ಟ್ರೀಯ ಗೀತೆಗಳ ಮಹತ್ವ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂಬುದು ಈ ಕೃತಿ ರಚನೆಯ ಹಿಂದಿನ ಉದ್ದೇಶ ಎಂದು ಸಂಪಾದಕರು ಸ್ಪಷ್ಟಪಡಿಸಿದ್ದಾರೆ.
©2025 Book Brahma Private Limited.