‘ಲಂಕೇಶ್ ಒಂದು ನೆನಪು’ ಪುಸ್ತಕವು ಡಾ. ನಾಗಭೂಷಣ ಬಗ್ಗನಡು ಅವರ ಸಂಪಾದಿತ ಕೃತಿ. ಬೆಂಗಳೂರು ಸಂಚಲನ ಸಾಂಸ್ಕೃತಿಕ ವೇದಿಕೆಯು ಬೆಂಗಳೂರಿನಲ್ಲಿ ಆಯೋಜಿಸಿದ ‘ಲಂಕೇಶ್ ಒಂದು ನೆನಪು’ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಪುಸ್ತಕ ಇದಾಗಿದೆ. ಲಂಕೇಶ್ ಮತ್ತು ಸಾಮಾಜಿಕ ಬದಲಾವಣೆ, ಕನ್ನಡ ರಂಗಭೂಮಿ ಮತ್ತು ಲಂಕೇಶ್, ಗಾಂಧೀವಾದ ಸಾಮಾಜಿಕವಾದ ಮತ್ತು ಲಂಕೇಶ್, ಸಮಾಜ ಮತ್ತು ಲಂಕೇಶ್, ಲಂಕೇಶರ ಕಾದಂಬರಿಗಳು, ಸಿನಿಮಾ ಮತ್ತು ಲಂಕೇಶ್, ಲಂಕೇಶ್ ಪತ್ರಿಕೆ ಮತ್ತು ಪ್ರಭಾವ, ಲಂಕೇಶರ ಕಥನ ಸಾಹಿತ್ಯ; ಎರಡು ಪರಿಕಲ್ಪನೆಗಳು ಇತ್ಯಾದಿ ವಿಷಯಗಳನ್ನು ಕುರಿತು ಕಿ. ರಂ ನಾಗರಾಜು, ಡಾ. ಕೆ ಮರುಳ ಸಿದ್ಧಪ್ಪ, ನಟರಾಜ್ ಹುಳಿಯಾರ್, ನಾಗತಿಹಳ್ಳಿ ಚಂದ್ರಶೇಖರ್, ಸಿ. ಎಸ್ ದ್ವಾರಕಾನಾಥ್, ಕಾ. ವೆಂ ಶ್ರೀನಿವಾಸಮೂರ್ತಿ ಮೊದಲಾದವರು ಲಂಕೇಶ್ ಕುರಿತು ಬರೆದ ಬರಹಗಳನ್ನು ಈ ಕೃತಿ ಒಳಗೊಂಡಿದೆ.
ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು. ...
READ MORE