ಸಾನೆ ಗುರೂಜಿಯು ಸಾದಾ ಜೀವನಕ್ಕೆ ಮತ್ತು ಉನ್ನತ ವಿಚಾರಗಳಿಗೆ ಹಾಗೂ ರಾಷ್ಟ್ರಪ್ರೇಮದ ಮಾದರಿಗಳಿಗೆ ಸೂಕ್ತ ವ್ಯಕ್ತಿ. ಹೀಗಾಗಿ, ಸಾನೆ ಗುರೂಜಿ ಅವರ ಕಥೆ, ಬರೆಹ, ಪತ್ರಲೇಖನ ಇತ್ಯಾದಿಗಳನ್ನು ಸಂಗ್ರಹಿಸಿ ಸಂಪಾದಿತ ಕೃತಿ-ಶ್ರೀ ಸಾನೆ ಗುರೂಜಿ ಹಾಗೂ ಅವರ ಕೃತಿಗಳು. ಬುರ್ಲಿ ಬಿಂದು ಮಾಧವ ಆಚಾರ್ಯರು ಕೃತಿ ಸಂಪಾದಕರು. ಚರಿತ್ರೆ ವಿಭಾಗದಲ್ಲಿ ಸ್ವರಾಜ್ಯ ಸಂಸ್ಥಾಪಕ ಶ್ರೀ ಶಿವರಾಯ, ವಿನೋಬಾ ಭಾವೆ, ಪ್ರಬಂಧ ವಿಭಾಗದಲ್ಲಿ ಸಾವಿನ ಸವಿ, ಕುರುಳು, ಕಥಾ ವಿಭಾಗದಲ್ಲಿ ಅಪೂರ್ವ ತ್ಯಾಗ, ಜಯಂತ, ಎಲೆ ತಿನ್ನುವ ಮನುಷ್ಯ, ರಾಮಕೃಷ್ಣ, ಶುಕ್ರಿ, ಗೋ, ಸಂಕೀರ್ಣ ವಿಭಾಗದಲ್ಲಿ ಪತ್ರ ಸಾಹಿತ್ಯ, ವಿಚಾರ ಸಂಕಲನ, ಕವನಗಳು ಹಾಗೂ ಕೊನೆಯಲ್ಲಿ ಸಾನೆ ಗುರೂಜಿ ಅವರ ‘ಆಸ್ತಿಕ’ ಕಾದಂಬರಿ ಪ್ರಕಟಿಸಲಾಗಿದೆ.
ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು. ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...
READ MORE