ಸಂಶೋಧಕ ವೀರೇಶ ಬಡಿಗೇರ ಅವರು ಪಾಂಚಾಳದ ಸಾಂಪ್ರದಾಯಿಕ ಹಾಡುಗಳನ್ನು ಸಂಗ್ರಹಿಸಿದ ಕೃತಿ-ಪಾಂಚಾಳ ಜಾನಪದ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ಡಾ. ಶೈಲಜಾ ಇಂ. ಹಿರೇಮಠ ಅವರು, ‘ಜಾನಪದರಲ್ಲಿ ಹಾಗೂ ಹಸ್ತಪ್ರತಿ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಹಸ್ತಪ್ರತಿ ಅಧ್ಯಯನ ಹಾಗೂ ಜಾನಪದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ರೂಪಿಸಿದ್ದಾರೆ. ’ ಪಾಂಚಾಳ ಜಾನಪದ’ ವು ಸಾಂಪ್ರದಾಯಿಕ ಹಾಡುಗಳ ಸಂಗ್ರಹವಾಗಿದೆ. ಡಾ. ವೀರೇಶ ಬಡಿಗೇರ ಅವರು ಹೇಳಿಕೊಂಡಂತೆ ಅವರು ಬಿ.ಎ ಪದವಿಯಲ್ಲಿದ್ದಾಗ ಸಂಗ್ರಹಿಸಿದ ಹಾಡುಗಳು ಇವಾಗಿವೆ; ಅಜ್ಜಿ ಹಾಗೂ ತಾಯಿ ಅವರಿಂದ ಈ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಜನಪದ ಹಾಡುಗಳನ್ನು ಹಾಡುವವರ ಜಂಡರ್ ಮತ್ತು ಸಮುದಾಯವನ್ನು ಅನುಲಕ್ಷಿಸಿ ಪಾಂಚಾಳ ಜನಪದ ಸಂಗ್ರಹ ರೂಪು ಪಡೆದಿದೆ. ಮುನ್ನುಡಿ ಬರೆಯುವ ನೆಪದಲ್ಲಿ ಯಾವುದು ಜನಪದ ಸಾಹಿತ್ಯ? ಮಹಿಳಾ ಜಾನಪದ ಸಾಹಿತ್ಯ, ಪುರುಷ ಜನಪದ ಸಾಹಿತ್ಯ ಎನ್ನುವ ವಿಂಗಡಣೆ ಜನಪದ ಸಾಹಿತ್ಯ ನಿರೂಪಕದಲ್ಲಿದೆಯೇ? ಮಹಿಳಾ ನಿರೂಪಕರಿಂದ ಅಭಿವ್ಯಕ್ತಗೊಳ್ಳುವ ಸಾಹಿತ್ಯವನ್ನಾಧರಿಸಿ ಮಹಿಳಾ ಸೃಜನಶೀಲತೆಯನ್ನು ನಿರ್ವಹಿಸಬಹುದೆ? ಹಾಗೆಯೇ, ನಿರೂಪಕರ ಜಾತಿ ಇಲ್ಲವೆ ಸಮುದಾಯವನ್ನಾಧರಿಸಿ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ನಿರ್ವಹಿಸಿರಬಹುದೇ? ಎನ್ನುವ ಪ್ರಮುಖ ಪ್ರಶ್ನೆಗಳನ್ನು ಪ್ರಸ್ತುತ ಪಾಂಚಾಳ ಜಾನಪದ ಹುಟ್ಟು ಹಾಕಿದೆ. ಈ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮುನ್ನುಡಿಯಲ್ಲಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
©2024 Book Brahma Private Limited.