ಲೇಖಕ ರಮೇಶ್ ಎಸ್. ಕತ್ತಿ ಅವರು ಸಂಪಾದಿಸಿದ ’ಮರೆಯಲಾಗದ ಕತೆಗಳು’ ಕೃತಿಯು ಸಣ್ಣಕತೆಗಳ ಸಂಕಲನವಾಗಿದೆ. ವಿಜಯಪುರ ಜಿಲ್ಲೆಯ ಕತೆಗಾರರು ನೀಡಿದ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ. ಮಹಿಳಾ ಕ್ಷೇತ್ರವನ್ನು ಪ್ರತಿನಿಧಿಸುವ ಕತೆಗಾರರೂ ಇಲ್ಲಿ ಸೇರಿಕೊಂಡಿದ್ದು, ಇದೊಂದು ವಿಜಯಪುರ ಜಿಲ್ಲೆಯ ಮಹತ್ವಪೂರ್ಣವಾದ ಪ್ರಾತಿನಿಧಿಕ ಸಂಕಲನವಾಗಿದೆ. ಜಿಲ್ಲೆಯ ಕತೆಗಾರರು ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ ಪರಂಪರೆಯಲ್ಲಿ ಸಣ್ಣಕತೆಗಳನ್ನು ಬರೆದು ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕತೆಗಳು ನೋವು-ನಲಿವು ತಾವು ಕಂಡುಂಡ ಬದುಕಿನ ವಿವಿಧ ಮುಖಗಳ ಚಿತ್ರಣವನ್ನು, ಜಾಯಮಾನ ಪರಿಸರವನ್ನು ಪ್ರತಿನಿಧಿಸುತ್ತದೆ. ರಾಘವೇಂದ್ರ ಖಾಸನೀಸ ಅವರ ಕತೆಯ ಮೂಲಕ ಕಥಾ ಸಾಗರ ತೆರೆದುಕೊಳ್ಳುತ್ತ ನವೋದಯದಿಂದ ಹಿಡಿದು ಈವರೆಗಿನ ಎಲ್ಲ ಕಾಲಘಟ್ಟದ ಚಳವಳಿಗಳ ಹಿನ್ನೆಲೆಯಲ್ಲಿ ಕತೆಗಳನ್ನು ನೀಡಿದ್ದಾರೆ. ಒಟ್ಟು 25 ಕತೆಗಾರರ 25 ಕತೆಗಳ ತುಣುಕುಗಳು ’ಮರೆಯಾಗದ ಕತೆಗಳು ಮಾಲೆಯಲ್ಲಿ ಸಂಕಲಿಸಲಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ಈ ಕತೆಗಳು ಅಧ್ಯಯನಕ್ಕೂ ಯೋಗ್ಯವಾಗಿದೆ.
©2024 Book Brahma Private Limited.