‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-7’ ರೂಪಕ ಮತ್ತು ನಾಟಕಗಳು. ಈ ಕೃತಿಯ ಕುರಿತು ಸಂಪಾದಕ ವಿಷ್ಣು ನಾಯಕ ಅವರು ಮೊದಲ ಮಾತುಗಳನ್ನು ಬರೆದಿದ್ದಾರೆ. ನಮ್ಮ ನಡುವಿನ ಹಿರಿಯ ವಿಚಾರವಾದಿ ಸಾಹಿತ್ಯ ವಿದ್ವಾಂಸರಲ್ಲಿ ಒಬ್ಬರಾದ ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯದ ಏಳನೆಯ ಸಂಪುಟವನ್ನು ಸಹೃದಯ ಓದುಗರ ಕೈಗೆ ಒಪ್ಪಿಸುತ್ತಿದ್ದೇನೆ. ಹರಿದು ಹಂಚಿಹೋಗಿರುವ ಗೌರೀಶರ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಬೇಕೆಂಬ ಸಂಕಲ್ಪದೊಂದಿಗೆ 1992 ರಲ್ಲಿ ಕಾರ್ಯಾರಂಭ ಮಾಡಿದೆವು. ಐದು ವರ್ಷಗಳಲ್ಲಿ ಏಳು ಸಂಪುಟಗಳನ್ನು ಮಾತ್ರ ಹೊರತರಲು ಸಾಧ್ಯವಾಗಿದೆ. ಹಿಂದಿನ ಸಂಪುಟಗಳಿಗೆ ನಾವು ತೊಡಗಿಸಿದ ಹಣವು ನಿರೀಕ್ಷಿಸಿದ ಅವಧಿಯೊಳಗಾಗಿ ಮರಳಿ ಬರದೇ ಇದ್ದುದೇ ಈ ವಿಳಂಬಕ್ಕೆ ಕಾರಣವಾಗಿದೆ ಎನ್ನುತ್ತಾ ಹಿಂದಿನ ಆರು ಸಂಪುಟಗಳ ಪರಿಚಯವನ್ನು ಬರೆದಿದ್ದಾರೆ. ಪ್ರಸ್ತುತ ಈ 7ನೇಯ ಸಂಪುಟದಲ್ಲಿ ಡಾ.ಕಾಯ್ಕಿಣಿಯವರ ಒಟ್ಟಿಗೆ 23ರೂಪಕಗಳು ಮತ್ತು ನಾಟಕಗಳು ಸೇರಿವೆ. ಇವು ಕಳೆದ ಆರು ದಶಕಗಳ ಕಾಲಾವಧಿಯಲ್ಲಿ ಬರೆದವುಗಳು. ಇವುಗಳಲ್ಲಿ ಹೆಚ್ಚಿನವು ಬಾನುಲಿ ಪ್ರಸಾರಕ್ಕಾಗಿಯೇ ಬರೆದವುಗಳಾಗಿವೆ. ಆಯಾ ಆಕಾಶವಾಣಿ ಕೇಂದ್ರಗಳು ಬೇರೆಬೇರೆ ಸಂದರ್ಭಗಳ ಅಗತ್ಯಗಳಿಗನುಸಾರವಾಗಿ ಕೇಳಿ ಪಡೆದವುಗಳು. ಈ ಮೊದಲು ಪುಸ್ತಕರೂಪದಲ್ಲಿ ಪ್ರಕಟವಾದ ಒಲುಮೆಯ ಒಗಟು, ಕ್ರೌಂಚಧ್ವನಿ, ಕರ್ಣಾಮೃತ ಹಾಗೂ ಆಕಾಶ ನಾಟಕಗಳು ಎಂಬ ನಾಲ್ಕು ಸಂಕಲನಗಳಲ್ಲಿಯ ಎಲ್ಲಾ ಕೃತಿಗಳು ಈ ಸಂಪುಟದಲ್ಲಿವೆ. ಅವುಗಳ ಹೊರತಾಗಿ ಅಪ್ರಕಟಿತ ರೂಪಕಗಳಾದ ನರಕ ಚತುರ್ದಶಿ, ಮಕರ ಸಂಕ್ರಮಣ, ದೀಪಾವಳಿ, ಮೀರಾ ಕೆ ಪ್ರಭು, ಅಂಬೆ, ಅಪ್ರಕಟಿತ ನಾಟಕಗಳಾದ ಅತ್ತೆಗೆ ಲತ್ತೆ ಹಾಗೂ ಚಿದಂಬರ ಸ್ವಾರಸ್ಯಗಳನ್ನೂ ಸೇರಿಸಿದ್ದೇನೆ ಎಂದಿದ್ದಾರೆ.
©2024 Book Brahma Private Limited.