ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿದವರು ಡಾ.ಬಿ.ಎಸ್. ಗದ್ದಗಿಮಠ. ನಾಡು ಕಂಡ ಅಪರೂಪದ ಜಾನಪದ ವಿದ್ವಾಂಸರು. ಅವರ ಬದುಕು-ಬರಹದ ಕುರಿತು ನಡೆದ ಚಿಂತನ ಮಂಥನ ಮಾಲೆಯಲ್ಲಿ ವಿವಿಧ ಜಾನಪದ ತಜ್ಞರು ಮಂಡಿಸಿದ ಲೇಖನಗಳ ಸಂಕಲನ ಇದಾಗಿದೆ.
ಡಾ.ಎಂ.ಎಸ್. ಲಠ್ಠೆ ಅವರು ಮಂಡಿಸಿದ ಡಾ ಬಿ.ಎಸ್. ಗದ್ದಗಿಮಠ ಅವರ ಬದುಕು-ಬರಹ-ಸಾಧನೆ, ವೀರಣ್ಣ ದಂಡೆ ಅವರ ಗದ್ದಗಿಮಠ ಅವರ ಬಿಡಿ ಬರಹಗಳು, ಬಿ.ವಿ. ಮಲ್ಲಾಪುರ ಅವರು ಮಂಡಿಸಿದ ಬಿ.ಎಸ್. ಗದ್ದಗಿಮಠ ಅವರ ಸಂಪಾದಿತ ಕೃತಿಗಳು, ಕೆ.ಆರ್. ದುರ್ಗಾದಾಸ ಅವರ ಗದ್ದಿಗಿಮಠ ಅವರ ಕನ್ನಡ ಜಾನಪದ ಗೀತೆಗಳು ಮುಂತಾದ ಲೇಖನಗಳು ಇದರಲ್ಲಿವೆ.
ಲೇಖಕ ಗವೀಶ ಹಿಮಠ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದವರು. ಪುರಾಣ ಪ್ರವಚನಕಾರ ವೀರಭದ್ರಯ್ಯ-ಪಾರ್ವತಮ್ಮ ದಂಪತಿಯ ಪುತ್ರರು. 08.09.1946 ರಂದು ಜನನ. ಓದಿದ್ದು ಕೊಪ್ಪಳ, ಧಾರವಾಡದಲ್ಲಿ. ಗುಲ್ಬರ್ಗ ವಿ.ವಿ. ಯ ಗ್ರಂಥಾಲಯದ ಪ್ರ.ಸಹಾಯಕರಾಗಿ ನಿವೃತ್ತರಾಗಿದ್ದರು. ಕಳೆದ 50 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದರು. ಜಾಗತೀಕರಣ ಮತ್ತು ಜಾನಪದ. ಡಾ.ಬಿ.ಎಸ್. ಗದ್ದಗಿಮಠ: ಬದುಕು ಬರಹ. ರಂಗಭೂಮಿ ಜೀವ-ಜೀವಾಳ ಶ್ರೀಧರ ಹೆಗಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ರಂಗಕನಸುಗಳು (1989-90) ಹಾಗೂ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ರಂಗಾಂತರಂಗ ((2003-04) ಶೀರ್ಷಿಕೆಗಳಡಿ ರಂಗಭೂಮಿ ಕುರಿತು ಅಂಕಣಗಳನ್ನು ಬರೆದು ರಂಗಕರ್ಮಿಗಳನ್ನು ಪರಿಚಯಿಸಿದರು. ಇವರ ಕಲಾವಿದರು ನಡೆದು ಬಂದ ...
READ MORE