ಕವಿ ಬಿ.ಎ. ಸನದಿ ಅವರ ಆಯ್ದ ಪ್ರಾತಿನಿಧಿಕ ಕವನಗಳ ಸಂಗ್ರಹ ಕೃತಿ-ಶಾಂತಿಗೊಂದು ಸವಾಲು. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಈ ಕೃತಿಯ ಸಂಪಾದಕರು. ತಮ್ಮ ನುಡಿಯಲ್ಲಿ ‘ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯಪೂರ್ಣವೂ ಆಗಿದೆ. ಇವರ ಕವನಗಳು ಸಾಮಾನ್ಯ ಜನರ ಪರವಾಗಿರುವ ದನಿಗಳಾಗಿವೆ. ಇಲ್ಲಿ ದಯಾರ್ದ್ರ ಭಾವನೆಯೊಂದಿಗೆ ಮಾನವೀಯತೆ ತಲೆ ಎತ್ತಿ ನಿಂತಿದೆ. ಅಸಮಾನತೆ, ಶೋಷಣೆ, ಅನ್ಯಾಯದ ವಿರುದ್ಧ ಆಕ್ರೋಶವಿದೆ. ಒಂದು ಸಿದ್ಧಾಂತದ ಬದ್ಧತೆಗೆ ಒಡ್ಡಿಕೊಂಡು ಜೀವನಾನುಭವ ಕಲಿಸಿದ ನಿಜದ ರೂಪಕಗಳು. ಕವನಗಳನ್ನು ಮೂರು ಭಾಗಗಳನ್ನಾಗಿಸಿದೆ. ಒಟ್ಟು 92 ಕವನಗಳಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.