ಮಾಧವಿ ಭಂಢಾರಿ ಕೆರೆಕೋಣ ಇವರು ಸಂಪಾದಿಸಿರುವ ನೀನುಂಟು ನಿನ್ನ ರೆಕ್ಕೆಗಳುಂಟು ಎಂಬ ಈ ಕವನ ಸಂಗ್ರಹ ಹಲವು ಕಾರಣಗಳಿಗಾಗಿ ವಿಶಿಷ್ಟವೂ ಗಮನಾರ್ಹವೂ ಆಗಿದೆ. ಈ ಸಂಕಲನದಲ್ಲಿ ಅವರು 48 ಕವಯತ್ರಿಯರ 72 ಕವನಗಳನ್ನು ಹೆಣೆದಿದ್ದಾರೆ. ಎಂದರೆ ಕನ್ನಡದ ಕವಯತ್ರಿಯರು ಈ ಒಂದು ದಶಕದಲ್ಲಿ ಚಿಂತಿಸಿಸಿರುವ, ಪ್ರತಿಕ್ರಿಯಿಸಿರುವ ಸಂಗತಿಗಳನ್ನು ಅರಿಯಲು ಇದೊಂದು ಕನ್ನಡಿಯಾಗಿ ನಿಂತಿದೆ.
ಕೃತಿಯ ಪರಿವಿಡಿಯಲ್ಲಿ ಭಾಗೀರಥಿ ಹಗಡೆ ಅವರ ರಾಮರಾಜ್ಯ, ಸುಕನ್ಯಾ ಮಾರುತಿ ಅವರ ಅಸ್ಮಿತೆ, ಎಚ್. ಎಲ್ ಪುಷ್ಪ ಅವರ ದೋಪ್ದಿ ಹಾಗೂ ಹೆಜ್ಜೆಗಳು, ಸುಕನ್ಯಾ ಮಾರುತಿ ಅವರ ಅಗ್ನಿಪುತ್ರಿ, ಎಮ್ ಆರ್ ಕಮಲ ಅವರ ಸಂಕುಲೋಪಾಖ್ಯಾನ, ಎಸ್. ಅರುಂಧತಿ ಅವರ ನಡೆದು ಬಂದ ದಾರಿ, ಎಸ್. ವಿ ಪ್ರಭಾವತಿ ಅವರ ಮೆಟ್ಟಿಲುಗಳು ಹೀಗೆ ಅನೇಕ ಕವನಗಳಿವೆ.
©2024 Book Brahma Private Limited.